Haridasa Sahitya — Vyasadasa

Tirthakshetra Sulaadi 78 — Udupi mahima sulaadhi

ಸುಳಾದಿ ೭೮ — ಉಡುಪಿ ಮಹಿಮಾ ಸುಳಾದಿ

Composer: Vijaya Dasaru · Deity: Krishna · Genre: Sulaadi

Kannada lyrics

ಉಡುಪಿ ಮಹಿಮಾ ಸುಳಾದಿ ರಾಗ ಕಲ್ಯಾಣಿ ಕಾಶೀತಲೇ ಕೃತಪದಾsಪಿ ಸರಿತ್ ಸುರಾಣಾಂ ಮಾಯಾತಿ ಯದ್ಧಪವಿತ್ರಸರೋಧುನಾsಪಿ | ರುದ್ರಾದಿದೇವಗಣಸೇವಿತಸರ್ವಭಾಗಂ ತದ್ರೂಪ್ಯಪೀಠಪುರಮಪ್ರತಿಮಂ ತ್ರಿಲೋಕ್ಯಾಮ್ || ಧೃವತಾಳ ಬದುಕಿದೆನು ಬದುಕಿದೆನು ಬಲುಜನ್ಮದ ಪುಣ್ಯ ಒದಗಿತೆನಗಿಂದು ಗುರುಗಳ ದಯದಿಂದ ಸದಮಲ ನಾನಾದೆ ಸತತ ಮಾಡಿದದುರಿತ ಉದಧಿ ಬತ್ತಿತು ಕಲ್ಯಾದಿಗಳು ನೋಡಿ ಎದೆ ಒಡದು ಎತ್ತಪೋಗುವೆವೆಂದು ಯೋಚಿಸಿ ಗದಗದನೆ ನಡುಗಿ ಭಯವೆ ಪೊಂದಿಪ್ಪರು ತ್ರಿದಶರೆಲ್ಲರು ನೆರದು ತಮತಮ್ಮೊಳು ಕುಣಿದಾಡಿ ಪದೊ ಪದೆಗೇ ಮಹೋತ್ಸವದಲ್ಲಿಪ್ಪರು ಇದೆ ಸತ್ಯ ಎನ್ನ ನೂರೊಂದು ಕುಲಗೋತ್ರಜರು ಮುದದಿಂದ ಗತಿಗಭಿ ಮೊಗವಾದರೂ ಬೆದರಲ್ಯಾತಕೆ ಇನ್ನು ಮುಂದಿನ ಜನನಕ್…