Haridasa Sahitya — Vyasadasa

Tirthakshetra Sulaadi 77 — Udupi kshetra mahima sulaadhi

ಸುಳಾದಿ ೭೭ — ಉಡುಪಿ ಕ್ಷೇತ್ರ ಮಹಿಮಾ ಸುಳಾದಿ

Composer: Vijaya Dasaru · Deity: Krishna / Madhva · Genre: Sulaadi

Kannada lyrics

ಉಡುಪಿ ಕ್ಷೇತ್ರ ಮಹಿಮಾ ಸುಳಾದಿ ರಾಗ ಷಣ್ಮುಖಪ್ರಿಯ ಧ್ರುವತಾಳ ಮಧ್ವಮತದ ಭಾಗ್ಯ ಎಂಥಾದೊ ಎಂಥಾದೊ ದುಗ್ದಾಬಿಯಂತೆ ಪ್ರಕಾಶವಾಗಿ ದಿಗ್ದಶದೊಳು ತುಂಬಿ ಸೂಸುತಲಿದೆ ಇದೇ ಸಿದ್ಧಾಂತ ಪ್ರಮೇಯವನು ಪ್ರತಿದಿನದಲಿ ನಿರ್ಧಾರವಾಗಿ ಗುಣಿಸಿ ಪೇಳುವದಕೆ ನಿತ್ಯ ರುದ್ರಾದಿಗಳಿಗಿದು ಅದ್ಭತವೊ ಭದ್ರಗತಿ ಬೇಕಾದ ಮನುಜ ಇಲ್ಲಿಗೆ ಬಂದು ಶುದ್ಧಾತ್ಮನಾಗಿ ಒಮ್ಮೆ ಸ್ಮರಿಸಲಾಗೀ ನಿರ್ದೋಷನಾಗುವನೇನೆಂಬೆನಯ್ಯಾ ಕರು - ಣಾಬ್ಲಿಯೇ ಕಾಣೋ ನಮ್ಮ ಗುರುರಾಯರು ಅಬ್ಬಿ ಮೇಖಳದೊಳು ಅಜ್ಞಾನ ವ್ಯಾಪಿಸಿ ಬದ್ಧ ಭವದೊಳು ನೆಲೆಗಾಣದೇ ಬಿದ್ದು ಹೊರಳುತಿರೆ ಜೀವೇಶ ಒಂದೆಂದು ಶ್ರದ್ಧೆಯಿಲ್ಲದೆ ಸುಜನ ಬಳಲುತಿರಲು ಉದ್ಧರಿಸುವೆನೆಂದು ಅತಿ ತೀವ್ರದಲಿ ಅ - ವಿದ್ಯಾ…