Haridasa Sahitya — Vyasadasa
Tirthakshetra Sulaadi 76 — Bhargava kshetra sulaadhi
ಸುಳಾದಿ ೭೬ — ಭಾರ್ಗವ ಕ್ಷೇತ್ರ ಸುಳಾದಿ
Composer: Vijaya Dasaru · Deity: Parashurama / Hari · Genre: Sulaadi
Kannada lyrics
ಭಾರ್ಗವ ಕ್ಷೇತ್ರ ಸುಳಾದಿ ರಾಗ ಬಿಲಹರಿ ಧ್ರುವತಾಳ ಆದಿಮೂರುತಿ ಪರಶುರಾಮನು ಸರ್ವ ಮೇದಿಸುರರಿಗೆ ಧಾರಿ ಎರೆದೂ ಮುದದಿಂದಲಿ ಸಿಂಹಾಚಲದಲ್ಲಿ ವಾಸವಾಗಿ ಕೈದು ಶಳದು ವಾರಿನಿಧಿಯಿಂದಲೀ ಮೇದಿನಿ ಬಿಡಿಸಿದ ಪ್ರತಾಪವನ್ನೆ ತೋರಿ ವೇದಪಾಲಕ ಮೆರದ ಸ್ತುತಿಗಳಿಂದ ಈ ಧರಿಗೆ ರಾಮಾ ಭೋಜನೆಂಬೊ ಭೂಪನಾ ಆದರದಿಂದಲಿ ಇರಪೇಳಲೂ ಮೇಧಾವ ರಚಿಸಿ ಭಾರ್ಗವನ ಸತ್ಕರುಣ ಸಂ ಪಾದಿಸುವೆನೆಂದು ಧಾರುಣಿಯಾ ಶೋಧಿಸೆ ಅದರೊಳು ಒಂದಹಿ ನೇಗಲಿಗೆ ಭೇದಾವಾಗಿ ಬರಲು ನಡುಗಿ ನೃಪತೀ ಹೇ ದಯಾಂಬುಧಿ ಎನ್ನಾಪರಾಧ ಕ್ಷಮಿಸೆಂದು ಪಾದಕೆ ನಮಿಸಿ ಬಿನ್ನೈಸಿ ಸಾಧು ಜೀವನು ರಾಮಗೆ ಮೊರೆಯಿಡಲೂ ವಿ- ನೋದದಿಂದಲಿ ಬಂದು ತಿಳುಪಿದನು ಸಾಧನಾ ನಿನಗಿದೆ ಪಾಪಾ ಮತ್ತಿಲ್ಲವೆಂದು…