Haridasa Sahitya — Vyasadasa

Tirthakshetra Sulaadi 75 — Valkala Janardana mahatma sulaadhi

ಸುಳಾದಿ ೭೫ — ಶ್ರೀವಲ್ಕಲ ಕ್ಷೇತ್ರಸ್ಥ ಜನಾರ್ದನಸ್ವಾಮಿ ಮಹಾತ್ಮ ಸುಳಾದಿ

Composer: Vijaya Dasaru · Deity: Janardana / Valkala · Genre: Sulaadi

Kannada lyrics

ಶ್ರೀವಲ್ಕಲ ಕ್ಷೇತ್ರಸ್ಥ ಜನಾರ್ದನಸ್ವಾಮಿ ಮಹಾತ್ಮ ಸುಳಾದಿ ರಾಗ ಗೌಳ ಧ್ರುವತಾಳ ಅರ್ಧಮನವೀಯಾದಿರು ಬಿದ್ದೆ ನಿನ್ನ ಪಾದಕ್ಕೆ ಉದ್ಧರಿಪುದು ಸಮುದ್ರ ಶಯ್ಯಾ ಹದ್ದು ಹಾವಿಗೆ ಹರಿದೆದ್ದು ಕವಿದಂತೆ ಕೃಷ್ಣಾಗಳಿಂದಲಿ ಪೊಂದಿಪ್ಪನೊ ಒದ್ದು ಕಡಿಗೆ ನೂಕೊ ಸದ್ದಡಗಿಸಿ ಖಳರ ಸದ್ದಾಗದಂತೆ ಒಳಗೆ ತಿದ್ದಿಡುವುದು ಶುದ್ಧ ಸ್ವಭಾವ ನಮ್ಮ ವಿಜಯವಿಠಲ ಜ - ನಾರ್ಧನ ರಕ್ಷಣ ಅಬ್ಲಿನಿವಾಸ || 1 || ಮಟ್ಟತಾಳ ಒಂದು ದಿನದಲಜನು ಚಂದದಿಂದಲಿ ಆ ನಂದ ವೈಜಯಂತಿ ಎಂದೆಂಬೊ ಸಭೆಯಲ್ಲಿ ವೃಂದಾರಕ ಸಿದ್ಧಗಂಧರ್ವ ಸರ್ವ ಸಂದಣಿಯಲ್ಲಿ ನವನಂದನರ ಸಹಿತ ಅಂದು ವಾಲಗವಾಗೆ ಮಂದಹಾಸದಲಿನಾ ರಂದ ಮುನಿಪ ನಡೆತಂದನು ಎದುರಾಗಿ ಇಂದಿರಾಪತಿ ಗೋವಿಂದ ವಿಜಯವಿಠ - ಲಂ…