Haridasa Sahitya — Vyasadasa

Tirthakshetra Sulaadi 74 — Kadari kshetra mahatma sulaadhi

ಸುಳಾದಿ ೭೪ — ಕದರಿ ಕ್ಷೇತ್ರ ಮಹಾತ್ಮ ಸುಳಾದಿ

Composer: Vijaya Dasaru · Deity: Narasimha / Kadari · Genre: Sulaadi

Kannada lyrics

ಕದರಿಕ್ಷೇತ್ರ ಮಹಾತ್ಮ ಸುಳಾದಿ ರಾಗ ಸಿಂಧುಭೈರವಿ ಧ್ರುವತಾಳ - ಜಗದೊಳಗಿದಕೆಲ್ಲಿ ಮಿಗಿಲುಗಾಣೆನೊ ಸರ್ಪ ನಗದ ಪ್ರದೇಶ ಇದರ ಅಗಲ ಸುತ್ತ ಯೋಜನ ಯುಗಯುಗದಲ್ಲಿ ಯಾತ್ರೆಗಳ ಮಾಡಿದ ಪುಣ್ಯ ಹಗಲೊಂದು ಕ್ಷಣವಿಲ್ಲಿ ಸುಗುಣನಾಗಿ ಇರಲು ಅಗಣಿತದಲ್ಲಿ ಭಕ್ತಗೆ ತಂದು ಕೊಡುವದು ನಿಗಮಾಸನ್ನುತ ಹರಿ ಮೊಗನ ಹಗೆಗಳಿಗಿಲ್ಲ ಖಗರಾಜನಿಲ್ಲಿ ತಪಸಿಗನಾಗಿ ಕೃಷ್ಣನ ಹೆಗಲಲ್ಲಿ ಪೊತ್ತು ತಿರುಗುವ ವರವನ್ನು ಪಡೆದು ಪೊಗಳಿದ ಜನ ಕಣ್ಣಿಗೆ ಸುಳಿವ ಸುಲಭ ನರ - ಮೃಗರೂಪ ವಿಜಯವಿಟ್ಠಲ ಕದರಿನಿವಾಸ ಬಗೆಬಗೆಯಿಂದ ಚನ್ನಿಗನಾಗಿ ಮೆರೆವ || 1 || ಮಟ್ಟತಾಳ ಪ್ರಹ್ಲಾದಗೆ ಮೆಚ್ಚಿ ಶ್ರೀಹರಿ ಉದುಭವಿಸಿ ಅಹಿತ ದಿತಿಸುತನ ಆವಹದೊಳು ಕೊಂದು ಸಾಹಸವುಳ್ಳ ಸುರರ ದಹನ…