Haridasa Sahitya — Vyasadasa
Tirthakshetra Sulaadi 73 — Mannargudi Sri Krishna sulaadhi
ಸುಳಾದಿ ೭೩ — ಮನ್ನಾರಿ ಶ್ರೀಕೃಷ್ಣ ಸುಳಾದಿ
Composer: Vijaya Dasaru · Deity: Krishna / Rajagopala · Genre: Sulaadi
Kannada lyrics
ಮನ್ನಾರಿ ಶ್ರೀಕೃಷ್ಣ ಸುಳಾದಿ ರಾಗ ಅಮೃತವರ್ಷಿಣಿ ಧ್ರುವತಾಳ ಬಾಲಾ ಗೋಪಾಲ ಗುಣಶೀಲಾ ವಿಶಾಲ ಮಹಿಮಾ ಕಾಲಾ ದೇಶತಃ ಪೂರ್ಣ ನೀಲವರ್ಣಕಾಳಿಂಗಮದಭಂಗ ಕಾಳಿಂದಿಯಾ ರಮಣ ಮೂಲಾವತಾರಾಭೇದ ಲೀಲಾ ವಿನೋದ ಏಳೇಳು ಲೋಕವ ಆಳುವ ಬಲುದೈವ ಪಾಲು ಮೊಸರು ಕದ್ದ ಲಾಲಾಸುರಿವ ಶುದ್ಧ ಆಳಿನ ಮನೋರಥ ಫಾಲಲೋಚನ ವಿನುತ ಬಾಲೆರ ಮಾನಭಂಗ ಮೌಳಿ ಮಕುಟ ತುಂಗ ಲೋಲ ಮನ್ನಾರಿಗುಡಿ ಪಾಲಾ ವಿಜಯವಿಠಲಾ ಸೋಳಾಸಾಸಿರ ವಾಮಲೋಚನೇರ ಪ್ರೀಯಾ || 1 || ಮಟ್ಟತಾಳ ಅರಿಧರ ಶಿರಿಧರ ಧರಾಧರ ಗಿರಿಧರ ಸುರಹರ ಸುರವರ ಮುರಹರ ನರವರ ಕರಿವರತ್ಪರಾತ್ಪರ ವಿಜಯವಿಠಲ ಪೀತಾಂ - ಬರದಂಬರ ಧಾರ ನಿರುತರ ಪರಿಪೂರ್ಣ ಶಿರಿಮನ್ನಾರಾದಾ ವರನಿಲಯಾ ಕೃಷ್ಣಾ || 2 || ತ್ರಿವಿಡಿತಾಳ ಋಷಿ ಹರ…