Haridasa Sahitya — Vyasadasa
Tirthakshetra Sulaadi 72 — Ghatikachala Hanuman sulaadhi
ಸುಳಾದಿ ೭೨ — ಘಟಿಕಾಚಲ ಸುಳಾದಿ
Composer: Vijaya Dasaru · Deity: Hanuman / Ghatikachala · Genre: Sulaadi
Kannada lyrics
ಘಟಿಕಾಚಲ ಹನುಮಂತದೇವರ ಸುಳಾದಿ ರಾಗ ರಂಜನಿ ಧ್ರುವತಾಳ ಜಯ ಜಯ ಜಯ ಜಯತು ಜಯದೇವಿ ಸಂಭವನೆ ಜಯ ಜಯ ಜಯ ಧನಂಜಯನ ನಿಜಬಾಂಧವನೆ ಜಯ ಧನಂಜಯನ ರಥಾಗ್ರದಲಿ ನಿಂದವನೆ ಜಯ ಜಯ ಜಯ ರೋಮ ಕೋಟಿ ಭವನೆ ಜಯ ಜಯ ಜಯ ಜಯ ಗುಣಶೀಲ ಪ್ರಭಾವನೆ ಜಯ ಜಯ ಜಯ ಜಯನೆ ವಿರೋಧಿ ಜವನೆ ಜಯ ಪವಮಾನ ಜಯ ಪತಿತ ಪಾವನ ಜಯ ಜಯ ವತ್ಸ ಭೂತ ರಹಿತ ಜಯ ವೇದ ವಿಖ್ಯಾತ ವಿ - ಜಯವಿಠಲನ ಭಯ ಭಕುತಿಯಿಂದ ಪೂಜಿಪ ಭಯದೂರ ಭವಹರ ಭಕ್ತರಾಧಾರ ಜಯತು || 1 || ಮಟ್ಟತಾಳ ಮುನಿಸಪ್ತರು ಎಲ್ಲ ಶ್ರೀ ನರಸಿಂಹನ ಧ್ಯಾನವ ಮಾಡುತ್ತ ಆನಂದದಲಿ ಸ - ಮಾನವಿಲ್ಲದ ಸ್ಥಳವನು ಮನಕೆ ತಂದು ಮನದಲಿ, ಗಿರಿಸಾನು ಬಳಿಯಲ್ಲಿದೆ ಜ್ಞಾನಾಂಬುಧಿ ನಮ್ಮ ವಿಜಯವಿಠಲರೇಯನ ಕಾಣುವ ತವಕದಲಿ ಧ್ಯಾನದಲ್ಲಿ…