Haridasa Sahitya — Vyasadasa

Tirthakshetra Sulaadi 71 — Totadri mahime sulaadhi

ಸುಳಾದಿ ೭೧ — ತೋತಾದ್ರಿ ಮಹಿಮೆ ಸುಳಾದಿ

Composer: Vijaya Dasaru · Deity: Totadri / Vishnu · Genre: Sulaadi

Kannada lyrics

ತೋತಾದ್ರಿ ಮಹಿಮೆ ಸುಳಾದಿ ರಾಗ ದರ್ಬಾರಿಕಾನಡ ಧ್ರುವತಾಳ ದೀನ ಬಂಧು ನಿನ್ನನೆ ನೆರೆ ನಂಬಿದೆ ಜ್ಞಾನಾಂಬುಧಿ ಯೊಳಗಾನಂದ ವಾಡಿಸು ಭಾನುವಿನ ಕೋಟಿ ಭಾನುವಿನಂತೆ ದಿ- ಕ್ಕನು ಪ್ರಕಾಶಿಸುವ ಮೌನಿಗಳೊಡಿಯಾ ಏನು ಪೇಳಲಿ ನಿನ್ನ ನಾಟಕತನವು ಕಾಣುವರಾರು ಗೀರ್ವಾಣರೊಳು ಅನಂತ ಜನುಮದಲಿ ನಾನೆ ನಿನ್ನವನಯ್ಯಾ ಮಾಣಾದೆ ಸಾಕುವದು ಮಾನದಿಂದ ಈ ನಾಡಿನೊಳಧಿಕ ತೋತಪರ್ವತ ವಾಸ ಶ್ರೀನಾರಿಯರಸ ವಿಜಯವಿಠಲ ಸುರ - ಧೇನು ಚಿಂತಾಮಣಿ ನೀ ನೊಲಿದವರಿಗೆ ||1|| ಮಟ್ಟತಾಳ ತೋತನೆಂಬವ ಕಿರಾತನು ಪ್ರತಿದಿನ ಭೂತಳದೊಳು ತನ್ನ ಜಾತಿ ಧರ್ಮದಿಂದ ತಾ ತಿರುಗುತಲಿರೆ ನೂತನ ತಾತನು ಪ್ರೀತಿ ಯಿಂದಲಿ ಬರಲಾತಗೆ ಅವನಂದು ಭೀತಿಯ ತೋರಿದನು ಭೀತಿಯ ತೋರಿದನು ನೂತನಾಂಗ…