Haridasa Sahitya — Vyasadasa

Tirthakshetra Sulaadi 69 — Ananta deva vratakathe sulaadhi

ಸುಳಾದಿ ೬೯ — ಅನಂತ ದೇವರ ವ್ರತಕಥೆ ಸುಳಾದಿ

Composer: Vijaya Dasaru · Deity: Ananta · Genre: Sulaadi

Kannada lyrics

ಶ್ರೀಮದನಂತದೇವರ ವ್ರತಕಥೆ ಸುಳಾದಿ ರಾಗ ಕಾಪಿ ಧ್ರುವತಾಳ ವ್ರತವೆ ಉತ್ತಮ ವ್ರತವು ಕ್ಷಿತಿಯೊಳಗೆ ನೋಡಲು ಮತಿವಂತರಿಗೆ ಮುಕ್ತಿ ಪಥಕೆ ಮೊದಲೂ ಲತೆ ಪಲ್ಲವಿಸಿದಂತೆ ಸತತದಲ್ಲಿ ಭಕ್ತಿ ಪ್ರತಿದಿನ ಹೆಚ್ಚುವದು ಅತಿಶಯದಲ್ಲಿ ಖತಿಗೊಳದಿರಿ ಶಾಶ್ವತವೆನ್ನಿರೋ ಜನರೂ ಪತಿತರಾಗದೆ ಸಮ್ಮತ ಬಡುವದೂ ಶತಕೋಟಿ ಅನ್ಯದೇವತಿಗಳ ವ್ರತಮಾತೆ ಹತವಾಗುವದು ಸುಕೃತವಿದ್ದದ್ದೂ ಚತುರಮೂರುತಿ ನಮ್ಮ ವಿಜಯವಿಟ್ಠಲನಂತಾ ವ್ರತಕಾವದು ಎಲ್ಲಿ ಪ್ರತಿಗಾಣೆ ಶ್ರುತಿಯೊಳು || 1 || ಮಟ್ಟತಾಳ ಸುಮಂತ ಭೂಸುರನಾ ಕುಮಾರಿ ಸುಶೀಲೆ ವಿಮಲಾ ಗುಣವಂತೆ ಶಮದಮೆಯಲ್ಲಿರಲು ಸುಮಂತ ವಿಪ್ರಾ ಉತ್ತುಮ ಕೌಂಡಿಣ್ಯಗೆ ಸುಮತಿಯಳನಿತ್ತಾ ಸುಮನಸರು ಮೆಚ್ಚೆ ರಮೆಯರಸ ನಮ್ಮ ವಿಜಯವ…