Haridasa Sahitya — Vyasadasa
Tirthakshetra Sulaadi 68 — Bhogananatha deva mahatma sulaadhi
ಸುಳಾದಿ ೬೮ — ಭೋಗಾನಂತ ದೇವರ ಮಹಾತ್ಮ ಸುಳಾದಿ
Composer: Vijaya Dasaru · Deity: Bhogananatha · Genre: Sulaadi
Kannada lyrics
ಭೋಗಾನಂತ ದೇವರ ಮಹಾತ್ಮ ಸುಳಾದಿ ರಾಗ ಮಲಯಮಾರುತ ಧ್ರುವತಾಳ ಮಲಯಾ ಮಧ್ಯದಲ್ಲಿಪ್ಪುದೇನೊ ಪಾವಿನ ಮೇಲೆ ಮಲಗಿ ಮುದದಿಂದ ನಸುನಗುವದೇನೊ ಪೊಳೆವ ವೈಕುಂಠಾದಿ ಹೊಳಲಾ ತೊರದು ಈ ನೆಲದಲ್ಲಿ ವಾಸವಾಗಿಪ್ಪದೇನೊ ವಲಯಾಕಾರದ ಜಂಬುದ್ವೀಪದೊಳಗೆ ಉತ್ತುಮ ನಿಲಯಾ ನೋಡಿಕೊಳದೆ ಬಂದಾಬಗಿ ಏನೋ ಜಲಜ ಸಂಭವಾದ್ಯರು ಒಲಿದು ಪೂಜಿಸುತಿರಲು ಇಳೆಯೊಳೀ ನರರಿಂದ ಪೂಜೆಗೊಂಬುವುದೇನೊ ಸುಲಭ ಸಾಧ್ಯ ವಿಜಯವಿಠಲ ಭೋಗಾನಂತ ಚಲುವ ದೇವರದೇವ ಒಲಿದವರಿಗೆ ಗಲಭೆ ಮಲಿಯಾ ಮಧ್ಯವಿಪ್ಪದೇನೊ ||1|| ಮಟ್ಟತಾಳ ಎವೆ ಇಡದಲೆ ನಿನ್ನಾ ನೋಡುವ ಭಾಗ್ಯ ಅವನಿಯೊಳಗೆ ನಿನ್ನಾ ನೋಡುವ ಭಾಗ್ಯ ಯಾವತ್ತು ನಿನ್ನಾ ನೋಡುವ ಭಾಗ್ಯ ಅವಯವಂಗಳು ಇಂದು ನೋಡುವ ಭಾಗ್ಯ ದಿವಿಜಾದಿಗಳಿಗೆ…