Haridasa Sahitya — Vyasadasa
Tirthakshetra Sulaadi 67 — Padmanabha Ananta sulaadhi
ಸುಳಾದಿ ೬೭ — ಪದುಮನಾಭ ಅನಂತ ಸುಳಾದಿ
Composer: Vijaya Dasaru · Deity: Padmanabha Ananta · Genre: Sulaadi
Kannada lyrics
ಪದುಮನಾಭ ಅನಂತ ಸುಳಾದಿ ರಾಗ ಸಿಂಧುಭೈರವಿ ಯಾ ತೈತ್ತಿರೀಯ ನಿಗಮಾಂತಗ ಕಿಂ ವದಂತೀ ಸೇವಾತ್ರಯೋ ಚಿತಫಲ ತ್ರಿತಿಯಂ ವದಂತಿ | ತತ್ರತ್ಯ ಸಂಶಯಮಪಾ ಕುರುತೇosಫ್ರಿಮಧ್ಯವಂ ಕ್ರಮೇಣ ಘಟಿಯನ್ಸ್‌ಶಿ ಪದ್ಮನಾಭಃ || ಅನಂತ ಪರಮ ಪುರುಷ ಅನಂತ ಅವತಾರ ಅನಂತ ಗುಣಾರ್ಣವ ಅನಂತ ಮಹಿಮ ಅನಂತ ಪರದೈವ ಅನಂತಾದ್ಭುತ ಲೀಲಾ ಅನಂತ ಅಪ್ರಮೇಯಾ ಅನಂತ ವರ್ನ ಅನಂತ ವೇದಾ ವಂದ್ಯ ಅನಂತಾಜಾಮರರು ಅನಂತಕಲ್ಪದಲ್ಲಿ ನಿನ್ನಾಂತ ನೋಡಲಾಗಿ ನಿನ್ನಂತ ತಿಳಿಯರೊ ಅನಂತ ಶಯನ ನಿನ್ನಾನಂತ ಬಲ್ಲೆನೆ ಅನಂತ ಶ್ರೀಮದಾ ಅನಂತ ವಿಜಯವಿಠಲ ಪ್ರಸನ್ನವದನಾ ಅನಂತಾನಂತ ಅವಾಂತರರಸೆ ಅನಂತ ಪದುಮನಾಭ ಶ್ರೀ ನಾರಸಿಂಹ ಅನಂತಾನಂತ ||1| ಮಟ್ಟತಾಳ ಹರಿಪರ ದೇವತಿಯಾ ನಿರೀಕ್ಷಿಸುವ…