Haridasa Sahitya — Vyasadasa
Tirthakshetra Sulaadi 66 — Ananta deva mahime sulaadhi
ಸುಳಾದಿ ೬೬ — ಅನಂತ ದೇವರ ಮಹಿಮೆ ಸುಳಾದಿ
Composer: Vijaya Dasaru · Deity: Ananta / Adikesha · Genre: Sulaadi
Kannada lyrics
ಅನಂತದೇವರ ಮಹಿಮೆ ಸುಳಾದಿ ರಾಗ ಚಂದ್ರಕೌನ್ಸ್ ಧ್ರುವತಾಳ ಕೇಶವ ಕೃಷ್ಣ ತ್ರಿಲೋಕೇಶ ಕೈಟಭಾರಿ ಸಾಸಿರಫಣಾವುಳ್ಳ ಶೇಷ ಶಯನಾ ಕೇಶನಾಶನಾ ನರಕೇಸರಿ ವೇಷಾನೆ ಮೀಸಲಾಭರಣಾ ವಿಭೂಷಣ ಸರ್ವದ ಶ್ರೀ ಸತಿ ಉರದಲ್ಲಿ ವಾಸವಾಗಿ ನಿತ್ಯ ತಾ ಸೇವಿಸುವಳು ಸಂತೋಷಾಬ್ಲಿಯೊಳು ಮುಳುಗಿ ಪೂಸಿದಾ ಶ್ರೀಗಂಧ ವಾಸನಿಯಾ ಕಮ ಲಾಸನ ಜಪಿಸಿ ಎಣಿಸುವವನನುದಿನ ಈ ಸುಖವಿನ್ನಾವ ದೇಶ ದೈವಂಗಳಲ್ಲಿ ಏಸೇಸು ಪರಿಯು ನಿಕ್ಷಿಸಲು ಕಾಣೆನೋ ಈಶಾದ್ಯಾರೊಡಿಯಾದಿ ಕೇಶಿಖಳಮರ್ದನಾ ಶ್ರೀಶಾ ವಿಜಯವಿಠಲಾ ಸುಲಭಾ ಆದಿ ಕೇಶವಾ ತಾಮ್ರಪರ್ಣಿವಾಸ ಲೋಕೇಶಾ ||೧| ಮಟ್ಟತಾಳ ಚತುರಾನನ ಭಜಿಸಿ ಅತಿದುರುಳಾ ಕೇಸಿ ಸತತ ತಪಸಿಯಾಗಿ ಮಿತಿ ಇಲ್ಲದ ದಿವಸ ಅತಿಶಯದಲಿ ವರವ ಇತರಾದಿಗಳಿಂದ ಹ…