Haridasa Sahitya — Vyasadasa
Tirthakshetra Sulaadi 65 — Adi Ananta sulaadhi
ಸುಳಾದಿ ೬೫ — ಆದಿ ಅನಂತ ಸುಳಾದಿ
Composer: Vijaya Dasaru · Deity: Ananta · Genre: Sulaadi
Kannada lyrics
ಆದಿ ಅನಂತ ಸುಳಾದಿ ರಾಗ ಶುದ್ಧಧನ್ಯಾಸಿ ಧ್ರುವತಾಳ ಶ್ರೀಮದನಂತಾ ಶ್ರೀ ಲಕುಮಿಕಾಂತಾ ಆ ದಿ ಮಧ್ಯಂತರಹಿತ ಪರಮಕಾಂತ ತಾಮಸ ಖಳಹಂತ ಸರ್ವರಿಗೆ ಬಲವಂತ ರೋಮ ರೋಮ ಗುಣವಂತ ಬಲು ನಿಶ್ಚಿಂತ ನಾಮ ಪೊಗಳುವಂಥ ಜನರಿಗೆ ದಯವಂತ ಕಾಮಜನಕ ಅನಂತ ತಾನಂತ ನಾಮಾ ಆದಿ ಅನಂತ ವಿಜಯವಿಠಲ ಸಂತ - ತಾ ಮನ್ನಿಸುವಂತ ರಂಗ ನಿಶ್ಯಾಂತ || 1 || ಮಟ್ಟತಾಳ ಜಯ ಜಯ ಜಯದೇವಾ ಜಯ ಜಯ ಸಂಜೀವಾ ಜಯ ಜಯ ಶ್ರೀಧವ ಜಯ ಭಕ್ತರಕಾವ ಜಯ ಅಘವನದಾವ ಜಯ ವರಗಳ ನೀವ ಜಯ ಭುವನ ಜೀವ ಜಯಗೋಕುಲ ಗೋವ ಜಯ ಜಯ ಜಯ ವಿಜಯವಿಠಲ ದೇವ ಜಯ ಜಯ ಅನಂತ ಜಯ ಜಯ ಧನಂ - ಜಯನಾಗ್ರಜ ಪ್ರೀಯಾ ಜಯ ಜಯ ಮುನಿಗೇಯಾ ॥ 2 ॥ ತ್ರಿವಿಡಿತಾಳ ಕ್ಷೀರವಾರಿಧಿಶಯನಾ ನೀರಜದಳನಯನಾ ಕಾರುಣ್ಯ ಮೂರುತಿ ಮೆರ…