Haridasa Sahitya — Vyasadasa

Tirthakshetra Sulaadi 64 — Suchindra mahatma sulaadhi

ಸುಳಾದಿ ೬೪ — ಶುಚೀಂದ್ರ ಮಹಾತ್ಮ ಸುಳಾದಿ

Composer: Vijaya Dasaru · Deity: Suchindra / Vishnu · Genre: Sulaadi

Kannada lyrics

ಶುಚೀಂದ್ರಂ ಮಹಾತ್ಮ ಸುಳಾದಿ ರಾಗ ರೇವತಿ ಇಂದ್ರಶೌಚವಿಧಾನತ್ತೆ ನ ಶುಚೀಂದ್ರಾತಿ ಪೌರುಷಮ್ | ಅನಿಂದ್ರಸ್ಯ ಮನಶ್ಯಾಚಂ ಮಮಕೃತ್ವಾ ತದಾರ್ಜಯ || ಧ್ರುವತಾಳ ಯೋಗದಭ್ಯಾಸಕಿಗದು ಜಾಗರ ಉಳ್ಳ ಕ್ಷೇತ್ರ ಆಗಮ ಸಿದ್ಧಾಂತದಲ್ಲಿ ನೋಡಿ ಯೋಗಿ ಜನರು ಇಲ್ಲಿ ಭೋಗದಾಶಿ ತೊರದು- ಲಾಗಿಸುವರು ಭವರೋಗ ವನಧಿ ಭೂಗೋಳಾದೊಳಗೋರ್ವ ರಾಗದ್ವೇಷವೇ ಬಿಟ್ಟು ಜಾಗು ಮಾಡಿದಿಲ್ಲಿಗೆ ಸಾಗೀ ಬಂದೂ ಬಾಗಿ ಕೇವಲ ದೃಢವಾಗಿ ಪ್ರಜ್ಞಾತೀರ್ಥದಲ್ಲಿ ತಾಗುಪ್ತದಲ್ಲಿ ಮಿಂದಾಗಲೆ ಕರ್ಮನಾಶ ಭಾಗೀರಥಿವಿಧೆ ಸಾಗರದಲ್ಲಿಗೆ ಪೋಗಿ ಪುಣ್ಯಾಪಡದೂ ಯಾಗಾದಿಗಳ ಮಾಡಲಾಗಿ ಆವಫಲ ವಾಗುವದದಕೆ ನೂರಾಗುವದು ಸಿದ್ಧ ಮೂಗೊಣ್ಣನೊಬ್ಬ ಬಲ್ಲ ನಾಗಶಯನ ವಿಜಯವಿಠಲ ಸುಧೀಂದ್ರ ಆಗರಾ ವಾಸನ…