Haridasa Sahitya — Vyasadasa
Tirthakshetra Sulaadi 63 — Navatirupati mahatma sulaadhi
ಸುಳಾದಿ ೬೩ — ನವತಿರುಪತಿ ಮಹಾತ್ಮ ಸುಳಾದಿ
Composer: Vijaya Dasaru · Deity: Navatirupati / Vishnu · Genre: Sulaadi
Kannada lyrics
ನವತಿರುಪತಿ ಮಹಾತ್ಮ (ತಾಮ್ರಪರ್ಣಿತೀರ) ಸುಳಾದಿ ರಾಗ ರೀತಿಗೌಳ ಧ್ರುವತಾಳ ಉತ್ತರಭಾಗದಲ್ಲಿ ಮೈತ್ರಾವರಣ ಮುನಿ ಪೋತ್ತುಮನ್ನಾ ಶಿಷ್ಯ ವಿಂದ್ಯಾಯೆಂಬುವನೂ ಮಿತ್ರತಾರಾಗಣ ಮೀರಿ ಬೆಳೆದು ಜಗಕೆ ಕತ್ತಲೆ ಮಾಡಲು ಸುರರು ಕಂಗೆಡಲು ಎತ್ತಣ ನೋಡಿದರತ್ತ ನಿತ್ಯಾನೈಮಿತ್ಯಗಳು ತತ್ತಳಗೊಳುತಿರೆ ಹೊತ್ತು ತೋರದಾಲೆ ಚಿತ್ತಪಲ್ಲಟರಾಗಿ ಸರ್ವಜೀವಾದಿಗಳೂ ಎತ್ತಣದದ್ಭುತವೆಂದು ಯೋಚಿಸುತ್ತ ಚಿತ್ರಚಾರಿತ ನಮ್ಮ ವಿಜಯವಿಟ್ಠಲ ದೇ- ವೋತ್ತುಮಾ ಕಾಶಿವಾಸ ಬಿಂದುಮಾಧವ ಎಲ್ಲಾ- ರುತ್ತುಮಾಂಗವೆ ಬಾಗಿ ತುತಿಸಾಲಿನಿತಾ ||1|| ಮಟ್ಟತಾಳ ಕರಿಸಿಕೊಂಡನ ಮಗನಾ ಕರುಣದಿಂದಲಿ ಬಂದಾ ದುರಿತವ ಹರಿಸೆಂದು ಹರಿ ನಿರೂಪಿಸಲು ವರಮುನಿ ಕೇಳುತಲೆ ಕರಗಳನೇ ಮುಗಿದು ನ…