Haridasa Sahitya — Vyasadasa
Tirthakshetra Sulaadi 62 — Tamraparni mahima sulaadhi (2)
ಸುಳಾದಿ ೬೨ — ತಾಮ್ರಪರ್ಣಿ ಸುಳಾದಿ
Composer: Vijaya Dasaru · Deity: Tamraparni / Vishnu · Genre: Sulaadi
Kannada lyrics
ತಾಮ್ರಪರ್ಣಿ ಸುಳಾದಿ ರಾಗ ಬೃಂದಾವನಸಾರಂಗ ಧ್ರುವತಾಳ ತ್ರಿಭುವನದೊಳಗೆ ನಿನ್ನ ವೈಭವಕ್ಕಿದಿರಾರು ನಾಭಿಯಲಿ ಮಗನ ಪೆತ್ತ ಶೋಭನ ದೇವ ಶ್ರೀ ಭೂದುರ್ಗೇರ ಕೂಡ ವೈಭೋಗದಿಂದ ಮೆರೆದ ವಿಭುವೆ ವಿಶ್ವ ಮಹಿಮಾ ವಿಭವ ವರದ ವಿಬುಧರ ಕೈಯಾ ಶುಲಭಾವಾದರಗಳಿಯಾ ಅಭಿಮುಖದವರಿಗೆ ಅಭಯ ಪರಿಪಾಲಿಪನೆ ಲೋಭಿಗಳರಸೆ ವಿಜಯವಿಠಲರೇಯಾ ದ್ವಿಭುಜನಾಗಿ ಹೃದಯಾಂಬುಜದ ನಿಲಯಾ ||೧|| ಮಟ್ಟತಾಳ ವೈಕುಂಠನಾಥ ವಿಜಯಾಸನ ದೇವ ಲೋಕಪರಿಪಾಲಾ ದೇವದೇವೇಶ ಆ ಕಂಜದಳ ನಯನಾ ಶ್ರೀ ಚೋರನಾಟ್ಯ ಶ್ರೀ ಕರನಿಕ್ಷೇಪ ಮಕರಾಯತ ಲಕ್ಷ್ಮೀಕಾಂತ ಶ್ರೀ ಆದಿನಾಥಸ್ವಾಮಿ ನೀ ಕರುಣದಿಂದ ಕಾಪಾಡುವುದು ಲೋಕರಕ್ಷಾಮಣಿ ವಿಜಯವಿಠಲರೇಯಾ ನೇಕ ಮಹಿಮನೆಂದು ವಾಕುಮಾಣದೆ ಪೇಳಿ ||೨|| ತ್ರಿವಿ…