Haridasa Sahitya — Vyasadasa

Tirthakshetra Sulaadi 61 — Tamraparni sulaadhi

ಸುಳಾದಿ ೬೧ — ತಾಮ್ರಪರ್ಣಿ ಸುಳಾದಿ

Composer: Vijaya Dasaru · Deity: Tamraparni / Vishnu · Genre: Sulaadi

Kannada lyrics

ತಾಂಬ್ರಪರ್ಣಿ ಸುಳಾದಿ ರಾಗ ಪೂರ್ವಿಕಲ್ಯಾಣಿ ಧ್ರುವತಾಳ ಲೋಕಾದೊಳಗೆ ಸಾಧನಬೇಕೆಂಬೊ ಮಹಾತ್ಮರು ಲೌಕಿಕವನ್ನೆ ಬಿಟ್ಟು ಏಕಮನದಲ್ಲಿ ಸಾಕಾರಾ ಭಕುತಿಯಲ್ಲಿ ಶ್ಲೋಕಾರ್ಥವನ್ನೆ ತಿಳಿದು ಶೋಕಂಗಳೀಡಾಡಿ ಜೋಕೆಯಿಂದ ಭೀಕರಗೊಳಿಸುವ ವಾಕು ಮರೆದು ವಿ - ವೇಕತನದಲ್ಲಿ ಈ ಕಲಿಯೊಳಗೆ ವೈಕುಂಠಪುರದ ಬಯಕೆ ಉಳ್ಳವರು ಶ್ರೀ ವೈಕುಂಠ ಯಾತ್ರಿಯ ಮಾಡಿರೆಂದೂ ವೈಕುಂಠ ನಾಮಾ ನಮ್ಮ ವಿಜಯವಿಠಲ ನಿಜ ವೈಕುಂಠಪುರದಿಂದ ಇಲ್ಲಿ ಮೆರೆದ || 1 || ಮಟ್ಟತಾಳ ತ್ರಿಜಗದೊಳಗೆ ತನ್ನ ಭಜಿಸುವ ಭಕ್ತರಿಗೆ ಭಜನೆಗೆಡದಂತೆ ನಿಜವರ ಕೊಡುವಲ್ಲಿ ಅಜಹರ ಗೀರ್ವಾಣ ವ್ರಜದೊಳಗಾನೆಂದು ಭುಜಗಾಧಿಪಶಯನ ವಿಜಯವಿಠಲರೇಯಾ ವಿಜಯಾಸನವಿಟ್ಟ ಮನಭಾಪುರೆ ಈತ || 2 | ರೂಪಕತಾಳ ಇಲ್ಲ…