Haridasa Sahitya — Vyasadasa
Tirthakshetra Sulaadi 60 — Setu dhanassukoti mahime sulaadhi
ಸುಳಾದಿ ೬೦ — ಸೇತು ಧನಸ್ಸುಕೋಟಿ ಮಹಿಮೆ ಸುಳಾದಿ
Composer: Vijaya Dasaru · Deity: Setu / Rama · Genre: Sulaadi
Kannada lyrics
ಸೇತು ಧನಸ್ಸುಕೋಟಿ ಮಹಿಮೆ ಸುಳಾದಿ ರಾಗ ಸುರುಟಿ ಧ್ರುವತಾಳ ಸೀತಾರಾಮನು ಬಂದು ಸೇತು ಬಂಧಿಸಿ ಖಳರಾ ಕೋತಿಗಳಿಂದಲಿ ಘಾತಮಾಡಿಸಿ ಪಾತಕ ರಾವಣನ್ನ ಯಾತನಿಗೆ ಕಳುಹಿ ಚಾತುರ್ಯದಲ್ಲಿ ಸುರವ್ರಾತವನು ಪಾಲಿಸಿ ಭೂತನಾಥನ ಇಲ್ಲಿ ಪ್ರೀತಿಯಿಂದ ಪ್ರತಿಷ್ಟಿ - ಸಿ ತಾನು ಪೆಸರಾದ ಭೂತಳದೊಳಗೆಲ್ಲ ಭೂತ ಪ್ರಮಥ ಮಥ ಪೇತಾವೃತಗಳಿಂದ ಜಾತವೇದಸನ ಮನ ಭೂತಳಾಧಿಪ ರಘುನಾಥನ ಚರಣಾಂಬುಜ ತಾ ತುತಿಸುತಿರೆ ಪೀತಾಂಬರಧರ ಶ್ರೀವಿಜಯವಿಠಲರೇಯಾ ||1|| ಮಟ್ಟತಾಳ ಸೇತುಮಧ್ಯದಲ್ಲಿ ಒಪ್ಪುತ ಪೊಳೆದನಾಗ ಮಾಧವನು ಗಂಧಮಾಧನಗಿರಿಯಲ್ಲಿ ವೇದಗಳು ತುತಿಸೆ ವೇಧನು ಕೊಂಡಾಡೆ ವೇದ ಪುರುಷಾ ಲವಣೋದಧಿ ಮಧ್ಯದಲ್ಲಿ ಸಾಧುಸಜ್ಜನರೊಡನೆ ಮೋದವಾಲಗವಾದನು ಹರುಷದಲಿ ಶ್ರೀದೇವ…