Haridasa Sahitya — Vyasadasa
Tirthakshetra Sulaadi 59 — Setumadhava sulaadhi
ಸುಳಾದಿ ೫೯ — ಸೇತುಮಾಧವ ಸುಳಾದಿ
Composer: Vijaya Dasaru · Deity: Setu Madhava / Rama · Genre: Sulaadi
Kannada lyrics
ಸೇತುಮಾಧವ ಸುಳಾದಿ ರಾಗ ಸಾರಮತಿ ಧ್ರುವತಾಳ ಚಿತ್ರವಿದೇನೊ ಶತಪತ್ರ ನಯನ ಪಾ - ವಿತ್ರನಾಮಕ ಶ್ರೀ ಕಳತ್ರ ಮುನಿಸ್ತೋತ್ರ ಸೂತ್ರಧಾರಕ ಲೋಕತ್ರಯವಂದಿತ ಪಾತ್ರರಿಗೆ ಸತ್ಪಾತ್ರ ತ್ರಿದಶಮಿತ್ರ ಶತ್ರುಸಂಹಾರ ವೀತಿಹೋತ್ರ ನೇತ್ರ ಪ್ರತಿಷ್ಟ ಛತ್ರಗದಾದಿಂದ ಪರ ಮಿತ್ರಪ್ರಕಾಶ ಶ್ವೇತ ಗಾತ್ರ ಮಾಧವಸೇತು ಕ್ಷೇತ್ರದಧಿಪತಿ ಧಾತ್ರಿಶಾ ವಿಜಯವಿಠಲರೇಯಾ ಸಾ ರ್ವತ್ರರ ಮನೋಹರ ಸುತ್ರಮವಂದ್ಯ ||1|| ಮಟ್ಟತಾಳ ಜಗದೇವನ ನೀನೆ ಜಗವಮೋಹಿಸುವಾನೆ ಯುಗಳ ಚರಣಕ್ಕೆ ನಿಗಳ ಹಾಕಿಸಿಕೊಂಡಬಗೆ ಮತ್ತಾವದು ಅಗಣಿತ ಹರಬೊಮ್ಮಾದಿಗಳನು ಪಾಶದಲ್ಲಿ ನಗುತ ನಗುತಲಿದ್ದು ಬಿಗಿದುಕಟ್ಟುವ ಚ - ನ್ನಿಗ ಬಲು ಚಪ್ಪಳಿಗನೆ ಅಘಹರ ವಿಜಯವಿಠಲ ಶೇತು ಮಾಧವ ರಘುಕುಲದಲಿ ಬಂ…