Haridasa Sahitya — Vyasadasa

Tirthakshetra Sulaadi 58 — Rameshwara mahatma sulaadhi

ಸುಳಾದಿ ೫೮ — ರಾಮೇಶ್ವರ ಮಹಾತ್ಮ ಸುಳಾದಿ

Composer: Vijaya Dasaru · Deity: Rameshwara / Shiva · Genre: Sulaadi

Kannada lyrics

ರಾಮೇಶ್ವರ ಮಹಾತ್ಮ ಸುಳಾದಿ ರಾಗ ಕಾಂಬೋಧಿ ಧ್ರುವತಾಳ ಅನಿಲತನುಜರಿಂದ ವನನಿಧಿಯಮ್ಯಾಲೆ ಮುನಿದು ಅಗಸ್ಯನು ಆಪೋಷಣವೆಗೊಳಗಾಗಿ ವನಚರಾದಿಗಳು ನೀರನು ಕಾಣಾದೆ ಬಳಲೆ ಅನಿಮಿಷ ಮಿಗಲಾದ ಗಣದವರು ಚಿಂತಿಸೆ ಮುನಿಸುತೆ ನದಿಯಾಗಿ ವಿನಯದಿಂದಲಿ ಬಂದು ಮುನಿ ಪುಂಗವಗೆ ವಂದಿನಿಯಾ ಮಾಡಾಲಾಗಿ ಘನವಾಗಿ ಅಳಿದು ಲವಣ ಸಾಗರೆನಿಸಾಲು ಅನುಮಾನದಲ್ಲಿ ವರುಣದೇವರು ನಿರುತಿದೆ ಮುನಿ ಸುರಪಾಲಕ ವಿಜಯವಿಠಲರೇ - ಯನ ದಯದಿಂದ ಉದ್ದರಣೆಯಾದ ವನಧಿ || 1 || ಮಟ್ಟತಾಳ ಕೋಪದಲ್ಲಿ ಇದ್ದು ಲೋಪಮುದ್ರಾಪತಿ ಕೂಪಾರಗೆ ಇತ್ತಾ ಶಾಪವ ಪರಿಹರಿಸಿ, ವಿ ಶಾಪವನೆ ಕೊಟ್ಟು ಅಪಾರ ದಯದಿಂದ ಆ ಪಾವಕಜರಿಗೆ ತಾಪಸಿಗನು ಮುನಿದು ಶಾಪವನೀಯ ಕಪಿರೂಪವನು ಧರಿಸಿ ಶ್ರೀಪತಿ ವಿಜ…