Haridasa Sahitya — Vyasadasa
Tirthakshetra Sulaadi 57 — Darbhashayana sulaadhi
ಸುಳಾದಿ ೫೭ — ದರ್ಭಶಯನ ಸುಳಾದಿ
Composer: Vijaya Dasaru · Deity: Darbhashayana / Rama · Genre: Sulaadi
Kannada lyrics
ದರ್ಭಶಯನ ಸುಳಾದಿ ರಾಗ ತೋಡಿ ಧ್ರುವತಾಳ ಮಬ್ಬು ಬಯಲಾಯಿತು ಉಬ್ಬಿತು ಎನ್ನ ಮನ ಹಬ್ಬಿತು ಎಳೆಬಳ್ಳಿ ಅಬ್ಬರದಿಂದಲಿ ಅಬ್ಬನಾಭನಾ ಪದಾಬ್ದವೆಂಬದಕೆ ಬಲು ದೊಬ್ಬ ದೊಲಗಾದಂತೆ ಲುಬು ತನವಿಲ್ಲಾದೆ ಹಬ್ಬವಾಯಿತು ಇಂದು ಗುಬ್ಬಿಗೆ ಮಣಿಗುಂಜಿ ಸುಬ್ಬದ ತೆರದಿಂದ ಅಬ್ಬಿತಯಾವು ಬೊಬ್ಬಿರಿವಾ ದೋಷಾ ಇಬ್ಬಾಗಿಯಾಯಿತು ನಿಬ್ಬರದ ಪುಣ್ಯ ಇಮ್ಮಡಿ ಫಲಿಸಿತು ಒಬ್ಬರೆನರಿವರು ಶಬ್ದಗಾಗೋಚರ ದರ್ಭಾಶಯನನಾದ ವಿಜಯವಿಠಲರೇಯಾ ಅಬ್ಬುಧಿವಾಸವಾದಾ ಹೆಬ್ಬಾಗೆ ಮಹಿಮೆ ।।1। ಮಟ್ಟತಾಳ ವಿಶ್ವಸೃಜಿ ಬಂದು ವಿಶ್ವಂಭರೆ ಯೊಳು ಅಶ್ವನೆಯ ಗೂಡ ಅಶ್ವತ್ಥದ ಬೀಜಾ ವಿಶ್ವಾಸದಿ ತರಿಸಿ ಈಶ್ವರ ಮೊದಲಾದ ವಿಶ್ವದೇವರೊಳು ಸಪ್ತಾಶ್ವನಂತೆ ಮೆರೆದಾ ವಿಶ್ವರ್ಯದಲಿ ಶ್ವೇತ…