Haridasa Sahitya — Vyasadasa
Tirthakshetra Sulaadi 56 — Panchatirupati mahatma sulaadhi
ಸುಳಾದಿ ೫೬ — ಪಂಚತಿರುಪತಿ ಮಹಾತ್ಮ ಸುಳಾದಿ
Composer: Vijaya Dasaru · Deity: Pancha Tirupati · Genre: Sulaadi
Kannada lyrics
ಪಂಚತಿರುಪತಿ ಮಹಾತ್ಮ ಸುಳಾದಿ ರಾಗ ಕೇದಾರಗೌಳ ಧ್ರುವತಾಳ ರತಿಪತಿ ಪಿತ ಪಾರ್ವತಿ ಪತಿ ಪಿತನಯ್ಯಾ ಶ್ರುತಿ ತತಿನುತ ಭಾರತಿ ಪಿತಗತಿ ಪ್ರೀತ ಸತತ ಮಹಿಮ ಉನ್ನತ ಲೀಲಾ ಅತಿಶಯ ಮತಿವಂತರಿಗೆ ಸದ್ಗತಿಯಾ ಕೊಡುವ ದೇವ ಕ್ಷಿತಿಯೊಳ ಪ್ರತಿಕೀರುತಿಯಾ ಮೆರೆವ ಸರ್ವ ವೃತವಾತಗಳಿಗೆ ದೂರತನಾಗಿ ಇಪ್ಪನೆ ಚ್ಯುತದೂತ ಮಿತನಾಮಿತರಾಗತ ಹೃದಯಾ ಹಿತವಂತ ಪಂಚ ತಿರುಪತಿ ನಾಸಾ ಎನ್ನ ಸಾ- ರಥಿ ವಿಜಯವಿಠಲಾ ಪತಿತಪಾವನ ದೇವ ದಿತಿನಂದನರ ತಾಯಿಯುವದಿತಿಸುತನವನ ದಾವಾ ||1|| ಮಟ್ಟತಾಳ ಕುಂಭಿಣಿಯನು ತಿರುಗಿ ಕುಂಭಸಂಭವ ಬಂದು ಸಂಭ್ರಮದಿಂದಲ್ಲೀ ತುಂಬಿದ ಮನದಿಂದೀ ಇಂಬುನೋಡಲು ಮರಿದುಂಬಿ ಮೃಗದ ಕಾ- ದಂಬ ವಸಂತದಲ್ಲಿ ಸಂಭವಿಸಿದಂತೆ ಬೆಂಬಿಡದಲಾಡಾಲು ಹಂಬಲ…