Haridasa Sahitya — Vyasadasa
Tirthakshetra Sulaadi 55 — Kuranga kshetra Panchatirupati sulaadhi
ಸುಳಾದಿ ೫೫ — ಕುರಂಗ ಕ್ಷೇತ್ರ ಪಂಚತಿರುಪತಿ ಸುಳಾದಿ
Composer: Vijaya Dasaru · Deity: Pancha Tirupati / Hari · Genre: Sulaadi
Kannada lyrics
ಕುರಂಗ ಕ್ಷೇತ್ರ ಪಂಚತಿರುಪತಿ ಸುಳಾದಿ ರಾಗ ಶಂಕರಾಭರಣ ಧ್ರುವತಾಳ ಬಲಿಗೊಲಿದು ಬಂದದೊಂದು ಮೂರುತಿ ಕಳಸಾಜಾಗೊಲಿದದೊಂದು ಮೂರುತಿ ಭಳಿರೆ ಭಗಗೊಲಿದದೊಂದು ಮೂರುತಿ ಸಲೆ ನಾರದಗೊಲೆದದೊಂದು ಮೂರುತಿ ಚೆಲುವ ಸಪ್ತರಿಗೊಲಿದದೊಂದು ಮೂರುತಿ ಇಳಿಯೊಳು ಮಹೇಂದ್ರಾಚಲದಲ್ಲಿ ಮೆರೆವ ಅಗ್ಗಳಿ ದೈವವಾದ ಪಂಚ ಮೂರುತಿ ಒಲಿದವರಿಗೆ ಸುಲಭವಾ ಮಾನಾದಿರೂಪಾ ಛಲದಂತಾ ವಿಜಯವಿಠಲ ಮೂರುತಿ ಬಲಗೊಲಿದು ಬಂದಾದೊಂದು ಮೂರುತಿ ||1|| ಮಟ್ಟತಾಳ ಲೋಕಮೋಹಕನಾಗಿ ಕಾಕುಸ್ತವಂಶಜನು ಸ್ವಕಾಂತಿಯನಗಲಿ ಲೌಕಿಕನ ತೆರದಿ ವ್ಯಾಕುಲದಲಿ ದಿವಾಕರ ನಂದನನತಾಕಲತಾ ನೆನಸಿ ಆ ಕಪಿ ಬಲವನು ಸಾಕಾರವಾಗಿ ಭೂ ಕುಮಾರಿಯನು ಏಕವಾಗಿ ನೋಡಬೇಕೆಂದು ಪೇಳಲು ಶ್ರೀಕಾಂತ ವಿಜಯವಿಠಲಾ ರ…