Haridasa Sahitya — Vyasadasa
Tirthakshetra Sulaadi 53 — Alagiri kshetra mahima sulaadhi
ಸುಳಾದಿ ೫೩ — ಅಳಗಿರಿ ಕ್ಷೇತ್ರ ಮಹಿಮಾ ಸುಳಾದಿ
Composer: Vijaya Dasaru · Deity: Venkatesha / Alagiri · Genre: Sulaadi
Kannada lyrics
ಅಳಗಿರಿ ಕ್ಷೇತ್ರ (ಮಧುರೆ) ಮಹಿಮಾ ಸುಳಾದಿ ರಾಗ ಹಂಸಾನಂದಿ ಧ್ರುವತಾಳ ವೃಷಭಾಚಲ ನಿವಾಸಾ ಋಷಿಜನ ಮನೋಲ್ಲಾಸಾ ಪಶುಪತಿ ಪಾಲಕ ರಕ್ಕಸ ಮಸ್ತಕ ಶೂಲಾ ನಿಶಿಕರವದನ ರಂಜಿಸುವ ಸಿರಿ ಸದನ ಅಸಮ ಪ್ರತಾಪ ಸಂತಾಮ ಸಜ್ಞಾನಾ ದಿನವಾ ನಿಶಿಚರ ದಾಹಕ ನಾಗಶಯನಾ ವಾಹನ ಗಹನ ವೃಷಭಾಸುರ ಮರ್ದನಾ ಶೋಭಿಸುವ ಗಿರಿವರ್ಧನ ಬಿಸಿಜದಳನಯನ ಕುಸುಮೇಶಾನಯ್ಯನೆ ವಸುಧಿಗಧಿಕ ಅಳಿಗಿರಿವಾಸ ತಿರ್ಮಲೇಶಾ ಪೆಸರಾದ ವಿಜಯವಿಟ್ಠಲ ಸೌಂದರ್ಯನೆ ನ- ಮಿಸುವೆ ನಿತ್ಯಾ ಪಾಲಿಸು ಎನ್ನಾ ಒಡಿಯಾ || 1 || ಮಟ್ಟತಾಳ ಮುನಿ ಮಂಡುಕನೆಂಬುವನು ಬಲು ಹರುಷದಲಿ ವನಜಾಕ್ಷನ ಪಾದಾವನು ಕಾಂಬುವೆನೆಂದೂ ಅನುನಯದಲಿ ಸಾಧನ ಕೇವಲವಾಗಿ ಮನ ಮಾಡಿದನು ಪ್ರಾವಣ ಗತಿಯಿಂದಲಿ ಘನ ವೃಷಭಾದ್ರಿ…