Haridasa Sahitya — Vyasadasa

Tirthakshetra Sulaadi 52 — Sri Ranganatha mahima sulaadhi

ಸುಳಾದಿ ೫೨ — ಶ್ರೀರಂಗನಾಥ ಮಹಿಮಾ ಸುಳಾದಿ

Composer: Vijaya Dasaru · Deity: Ranganatha · Genre: Sulaadi

Kannada lyrics

ಶ್ರೀರಂಗನಾಥ ಮಹಿಮಾ ಸುಳಾದಿ ರಾಗ ಕಾಂಬೋಧಿ ಧ್ರುವತಾಳ ಇಂದ್ರಾದಿಗಳು ತಮ್ಮ ಸಂದಣಿಯಾ ಸಮೇತಾ ಒಂದಾರು ಪ್ರಾಕಾರಾ ಒಂದಾರು ಬೀದಿಯೊಳು ನಿಂದು ನಿರ್ಮಳರಾಗಿ ಒಂದೊಂದು ಪರಿ ರಂಗ ಮಂದರದಲ್ಲಿದ್ದ ಇಂದಿರೇಶನ ಪಾದ - ದ್ವಂದ್ವವ ಎಣಿಸಿ ಒಂದೊಂದು ಗುಣಗಳ ನಂದವ ನೆನೆವುತ್ತ ಮುಂದುಗಾಣದ ಸುಖ - ಸಿಂಧುವಿನೊಳಿಪ್ಪರು ಕಂಧರವನ್ನು ತೂಗಿ ಗಂಧರ್ವ ತುಂಬುರ ನಾರಂದನು ಮಹತಿ - ಯಿಂದ ನುಡಿಸಿ ತಾರಾ ಮಂದರದಿಂದಲಿ ಕಂದೆರದೂ ಮುಚ್ಚಿ ಕಂದನ ನುಡಿಯಂತೆ ಒಂದೊಂದು ಕೀರ್ತಿಸಿ ವಂದನೆ ಮಾಡಲು ಬಂದ ಶರೀರ ಸಾಲದೆಂದೆಂಬೊ ಗಾದೆಯಾಗೆ ಮಂದರಧರ ಗೋವಿಂದ ವಿಜಯವಿಟ್ಠಲ ಸುಂದರವಿಗ್ರಹ ಒಂದೆ ದೈವವೆ ರಂಗ || 1 || ಮಟ್ಟತಾಳ ರಂಗ ರಂಗ ರಂಗಾಧಾಮಾ ರಂಗ ಕಸ್ತೂ…