Haridasa Sahitya — Vyasadasa

Tirthakshetra Sulaadi 51 — Sri Ranganatha mahatma sulaadhi

ಸುಳಾದಿ ೫೧ — ಶ್ರೀರಂಗನಾಥ ಮಹಾತ್ಮ ಸುಳಾದಿ

Composer: Vijaya Dasaru · Deity: Ranganatha · Genre: Sulaadi

Kannada lyrics

ಶ್ರೀರಂಗನಾಥ ಮಹಾತ್ಮ ಸುಳಾದಿ ರಾಗ ವರಾಳಿ ಧ್ರುವತಾಳ ರಂಗ ರಂಗ ವಿಹಂಗ ತುರಂಗ ತು - ರಂಗ ವದನ ತುರಂಗ ಖಳರ ಮರ್ದನ ರಂಗ ಭಕ್ತರಂಗದೊಡಿಯಾ ಶಾ - ರಂಗ ಚಾಪಪಾಣಿ ಸಂಗೀತಲೋಲ ಮಂಗಳಾಂಗ ಪ್ಲವಂಗ ನಾಯಕ ತಾ - ರಂಗ ಮಹಿಮ ಪಾತಂಗ ಕುಲೋದ್ಭವ ರಂಗ ನಿಸ್ಸಂಗ ದೋಷಸಂಗಾ ಸತತ ದೂರಾ ತುಂಗ ವಿಕ್ರಮ ಭುಜಂಗಶಯನಾ ಮಾ - ತಂಗ ವರದ ದೈತ್ಯಭಂಗ ಹೃತ್ಸರಸಿಜ ಶೃಂಗ ಭಾನುತೇಜ ಗಂಗಾಜನಕ ಜಂಗಮ ಸ್ಥಾವರ ಜಂಗುಳೀ ಪರಿಪಾಲ ರಂಗ ಮಂದಿರ ವಾಸರ ರಂಗ ರಂಗೇಶಾ ರಂಗ ಮೂರುತಿ ನೀಲಾಂಗ ವಿಜಯವಿಠಲ ಡಿಂಗರಿಗೊಲಿವ ತಿರುವೆಂಗಳೇಶಾ || 1 || ಮಟ್ಟತಾಳ ಸರಸಿಜಭವನಿಂದ ನಿರುತ ಪೂಜಿಗೊಂಬ ವರ ಶ್ರೀರಂಗದೇವಾ ಧರಣಿಯೊಳಗೆ ಸವಿತರವಂಶಕೆ ಬಂದು ಪರಿಪರಿವಿಧದಲಿ ಮೆರೆದು ಪಾ…