Haridasa Sahitya — Vyasadasa

Tirthakshetra Sulaadi 50 — Madhyarjuna mahime sulaadhi

ಸುಳಾದಿ ೫೦ — ಮಧ್ಯಾರ್ಜುನ ಮಹಿಮೆ ಸುಳಾದಿ

Composer: Vijaya Dasaru · Deity: Madhyarjuna / Hari · Genre: Sulaadi

Kannada lyrics

ಮಧ್ಯಾರ್ಜುನ ಮಹಿಮೆ ಸುಳಾದಿ ರಾಗ ಕೀರವಾಣಿ ಧ್ರುವತಾಳ ಏನು ಪೇಳಲಿ ಮಧ್ಯಾರ್ಜುನದ ಮಹಾಮಹಿಮೆ ಏಣಿ ಸಾಲಳವೇನು ಜ್ಞಾನಿಗಳಿಗೆ ಕೋಣಿಯೊಳಗೆ ಪುಟ್ಟಿ ಅನಂತಾಜನುವಾದಲ್ಲಿ ಮಾಣಾದೆ ಮಾಡಿದಾ ದುರಿತಾವೆಂಬೊ ಮಾಣಾದೆ ಮಾಡಿದಾ ದುರಿತಾವೆಂಬೊ ಕಾನನಾ ರಾಸಿಗೆ ಹವ್ಯವಾಹನನಾಗಿ ತಾನಿಗಾಲಿಪ್ಪಾದು ತವಕದಿಂದ ಗೇಣಿಗೇಣಿಗೆ ನಿಂದು ಯಾತ್ರಿಯಾ ಪತಿಕರಿಸಿ ಆನಂದಾವಾಗುವದು ಅನುಗಾಲವೊ ಭಾನುಕೋಟಿತೇಜಾ ವಿಜಯವಿಠಲನ್ನ ನೀನೆಂದು ನಿತ್ಯ ಸ್ತುತಿಸೆ ಸಾನುಕೂಲಾವೆನ್ನಿ ||1|| ಮಟ್ಟತಾಳ ಕಶ್ಯಪ ವಿಭಾಂಡ ಋಷಿಗಳೀರ್ವಾರು ಹೃಷಿಕೇಶನ ಒಲಿಸುವೆವು ಎನುತಲಿ ಕುಶಲಮತಿಯಲ್ಲಿ ವಸುಧಿಯೊಳಗೆ ಯಮನಾ ದೆಶೆಯಲ್ಲಿಗೆ ಬಂದು ಕೃಷಿಯಾದಿಯ ತೊರೆದು ಹಸನಾಗಿ ಇರುತಿರೆ ವ…