Haridasa Sahitya — Vyasadasa
Tirthakshetra Sulaadi 49 — Arunachala mahatma sulaadhi
ಸುಳಾದಿ ೪೯ — ಅರುಣಾಚಲ ಮಹಾತ್ಮ ಸುಳಾದಿ
Composer: Vijaya Dasaru · Deity: Arunachaleshwara · Genre: Sulaadi
Kannada lyrics
ಅರುಣಾಚಲ ಮಹಾತ್ಮ ಸುಳಾದಿ ರಾಗ ವಲಚಿ ಧ್ರುವತಾಳ ಅರುಣಾಚಲೇಶ್ವರಾ ಕರುಣವ ಮಾಡಯ್ಯ ಹರಣಾ ನಿನ್ನದು ನಾಗಾಭರಣ ದೇವ ತರುಣ ಭಕುತಿಯಲ್ಲಿ ಶರಣು ಪೋಗುವೆ ನಿನಗೆ ಮರಣ ಕಾಲಕ್ಕೆ ದೈತ್ಯಾಹರಣ ಹರಿಯಾ - ಚರಣ ಯುಗಳ ದಿವ್ಯ ಸ್ಮರಣೆ ಒದಗುವಂತೆ ಕರಣ ಶುದ್ಧಿಯಲ್ಲಿ ಉದ್ದರಣ ಮಾಡೋ ಧರಣಿಧರಾ ನಮ್ಮ ವಿಜಯವಿಟ್ಠಲನ ಶ್ರೀ - ಚರಣಾ ಮನದಲ್ಲಿಟ್ಟ ಅರುಣ ಕಪರ್ದಿ || 1 || ಮಟ್ಟತಾಳ ಏಳು ಯೋಜನ ಉದ್ದ ಶೈಲವಿಪ್ಪದು ಕಾಣೋ ಏಳು ಯೋಜನ ಸುತ್ತಾ ಲೋಲ ಪುಣ್ಯಭೂಮಿ ಭೂಲೋಕದ ಒಳಗೆ ಕೇಳಿರಿ ಇದಕ್ಕೆಲ್ಲ ಮೇಲಾದ ಯಾತ್ರಿ ಪೇಳುವರಾರೈಯ್ಯಾ ಏಳು ವಾಸರವಿದ್ದ ಆಳುಗಳ ಪುಣ್ಯ ಪೇಳಲು ಎನ್ನಳವೆ ಏಳೇಳು ಜನ್ಮಕ್ಕೆ ಪಾಲಸಾಗರಶಯ್ಯಾ ವಿಜಯವಿಟ್ಠಲನ್ನಾ ಆಳಾಗಿಲ್ಲಿಪ…