Haridasa Sahitya — Vyasadasa

Tirthakshetra Sulaadi 48 — Kumbhakone mahime sulaadhi

ಸುಳಾದಿ ೪೮ — ಕುಂಭಕೋಣೆ ಮಹಿಮೆ ಸುಳಾದಿ

Composer: Vijaya Dasaru · Deity: Sharngapani · Genre: Sulaadi

Kannada lyrics

ಕುಂಭಕೋಣೆ ಮಹಿಮೆ ಸುಳಾದಿ ರಾಗ ಪೂರ್ವಿಕಲ್ಯಾಣಿ ಧ್ರುವತಾಳ ಗೆಲ್ಲೋದರಲ್ಲಿ ನಿನಗೆಲ್ಲಿ ಎದುರು ಇಲ್ಲ ಕೊಲ್ಲೋದರಲ್ಲಿ ನೀನಲ್ಲಾದೆ ಒಬ್ಬರಿಲ್ಲ ಬಲ್ಲಿದಾರೊಳಗೆ ನೀನಲ್ಲಾದೆ ಒಬ್ಬರಿಲ್ಲ ಎಲ್ಲಾ ಭಕ್ತರೊಳು ನೀನಲ್ಲಾದಿನ್ನಾರಿಲ್ಲ ಬಲ್ಲೂರಾ ದೈವವೆ ಬಿಲ್ಲು ಕರದಲ್ಲಿ ಪಿಡಿದು ಇಲ್ಲಿ ಪವಳಿಸಿಪ್ಪ ಉಲ್ಲಾಸವೇನಯ್ಯಾ ಮಲ್ಲರಾ ಎದೆದಲ್ದಾಣ ವಿಜಯವಿಠಲ ಶಾರಂಗಪಾಣಿ ಬಲ್ಲಗಾರರಸೆ ಎಲ್ಲೆ ವೈಕುಂಠ ನಿನ್ನಗೆಲ್ಲೆ ಈ ಪರಿವೊ ।।೧।। ಮಟ್ಟತಾಳ ಹೇಮಗಿರಿಯಂಥ ಹೇಮ ವಿಮಾನದೊಳು ಹೇಮಪುಟವಾಗಿ ಹೇಮಮಯದ ಮಕುಟಾ ಹೇಮಕುಂಡಲ ಕರ್ನಾ ಹೇಮಹಾರ ಕೊರಳಾ ಹೇಮಕಟಿಸೂತ್ರಾ ಹೇಮಾಂಬರ ಚಿತ್ರ ಹೇಮನೂಪುರ ಗೆಜ್ಜೆ ಹೇ ಮಹಾಮಹಿಮಾನೆ ಹೇ ಮಲಗಿಪ್ಪನೆ ಹೇಮಮುನಿಗೆ…