Haridasa Sahitya — Vyasadasa
Tirthakshetra Sulaadi 47 — Srimushna varaha sulaadhi
ಸುಳಾದಿ ೪೭ — ಶ್ರೀಮುಷ್ಣ ವರಾಹದೇವರ ಸುಳಾದಿ
Composer: Vijaya Dasaru · Deity: Varaha · Genre: Sulaadi
Kannada lyrics
ಶ್ರೀಮುಷ್ಣ ವರಾಹದೇವರ ಸ್ತೋತ್ರ ಸುಳಾದಿ ರಾಗ ಸೌರಾಷ್ಟ್ರ ಧ್ರುವತಾಳ ಜೀವನ್ನ ಭಿನ್ನ ಗಗನಾವನ್ನಾ ಜನಕಾ ತ್ರಿ - ಭುವನ್ನ ಸಂಜೀವನ ಕಾವನಯ್ಯಾ ಪಾವನ್ನ ಕಾಯ ಕಂಬುಗ್ರೀವನ್ನ ವರವಾ - ನೀವನ್ನ ಅಘವನ ದಾವನ್ನ ಧರುಣಿ - ಧಾವನ್ನ ಸುರತತಿ ಕಾವನ್ನ ಸರಸಿಜಾ - ಭಾವನ್ನ ನಾಸದುದು ಭಾವನ್ನಾ ನಮಿತರ ನೋವನ್ನು ಕಾವನ್ನ ಶ್ರೀ ವನ್ನಜಾ-ನಯ - ನಾ ವಿಜಯವಿಠಲಾ ದೇವನ್ನ ಪಾದ ರಾ - ಜೀವನ್ನವಾ ನಂಬಲು ಜೀವನ್ನಾದ್ಯಾರೊಪ್ಪುವರೂ ಈವನ್ನಾ ನುತಿಸೆ ಮತ್ತಾವನ್ನ ವಶವೆ || 1 || ಮಟ್ಟತಾಳ ಕನಕಾಕ್ಷನ್ನ ಮಡುಹಿ ಅನಿಮಿಷ ಗಣದವರ ಕ್ಷಣದೊಳು ಪಾಲಿಸಿ ಮನದಿಚ್ಛೆಯಲ್ಲಿ ಮನಸುಖಿರಾಯನು ಜನರಗೋಸುಗಡುಳ್ಳಿ ವನದ ಮಧ್ಯದಲಿ ಮನೋಹರವಾಗುತ್ತ ತನಗೆ ತಾನೆ ನಿಂದ…