Haridasa Sahitya — Vyasadasa

Tirthakshetra Sulaadi 46 — Kanchi varadaraja sulaadhi 2

ಸುಳಾದಿ ೪೬ — ಕಂಚಿ ವರದರಾಜ ಸುಳಾದಿ 2

Composer: Vijaya Dasaru · Deity: Varadaraja · Genre: Sulaadi

Kannada lyrics

ಕಂಚಿ ವರದರಾಜ ಸುಳಾದಿ ರಾಗ ಆನಂದಭೈರವಿ ಧ್ರುವತಾಳ ತಮನನ್ನ ಕೊಂದು ಆಗಮವ ಬಿಡಿಸಿ ತಂದು ಸುಮನಸರಿಗೆ ಸುಧೆ ಕ್ರಮದಿಂದಲೆರದೇ ಕುಮತಿ ಹೇಮಾಕ್ಷನ ಗಮಕವ ಮುರಿದೆ ಸಮತಿಯ ಮೊರೆ ಕೇಳಿ ಅಮರಾರಿಯ ಸೀಳಿ ಅಮಮ ಯೋಮಕೆ ಬೆಳೆದು ನಮಿತನ್ನ ತುಳಿದು ಜಮದಗ್ನಿ ನಿಜಜಾತಾ ಸಮರದೊಳು ನಿರ್ಭೀತಾ ಉಮೆ ಅರಸನ್ನ ಪ್ರೀತಾ ಕಮಲಾಪ್ತ ಕುಲಜಾತಾ ಯಾಮಾದಿಯಾ ಗೆದ್ದು ಸುರದ್ರುಮವ ತಂದ ಗಂಭೀರ ರಮಣೀರ ವ್ರತವಾಕ್ರಮಿಸಿದ ಬಲುದೇವಾ ವಿಮಲಾ ತುಂಗಾ ತುರಂಗಾ ಗಮನ ದುರಿತ ಭಂಗಾ ಅಮಿತಮಹಿಮ ಕಂಚಿವರದ ವಿಜಯವಿಠಲ ಸಮರಾರು ನಿನಗನುಪಮ ಚಿತ್ರ ಚರಿತ್ರಾ || 1 || ಮಟ್ಟತಾಳ ಪುಣ್ಯ ಶ್ಲೋಕರಾಯಾ ಪುಣ್ಯ ಪೂರ್ತಿರಾಯಾ ಪುಣ್ಯವಂತರಾಯಾ ಪುಣ್ಯಕೀರ್ತನೆರಾಯಾ ಪುಣ್ಯಮಹಿಮರ…