Haridasa Sahitya — Vyasadasa

Tirthakshetra Sulaadi 45 — Kanchi varadaraja sulaadhi 1

ಸುಳಾದಿ ೪೫ — ಕಂಚಿ ವರದರಾಜ ಸುಳಾದಿ 1

Composer: Vijaya Dasaru · Deity: Varadaraja · Genre: Sulaadi

Kannada lyrics

ಕಂಚಿ ವರದರಾಜ ಸುಳಾದಿ ರಾಗ ಕೇದಾರಗೌಳ ಧ್ರುವತಾಳ ಅಡಿಗಡಿಗೆ ಭಕ್ತರನ ನೋಡುವ ರಾಜಾ ಎಡಿಗೆಡಿಗೆ ಭಕ್ತರನ ಪಾಲಿಸುವ ರಾಜಾ ನುಡಿನುಡಿಗೆ ಭಕ್ತರನ ನುಡಿಸುವ ರಾಜಾ ನಡಿಗಡಿಗೆ ಭಕುತರನು ಬಿಡದಿಪ್ಪ ರಾಜಾ ಜಡಿತಾಭರಣದಲ್ಲಿ ಝಗಝಗಿಪ ರಾಜಾ ಮುಡಿಗೆ ಪರಮಳ ಕುಸುಮಾ ಮುಡದಿದ್ದ ರಾಜಾ ಕುಡತಿಪಾಲ ವಲಿಗೆ ವಲಿದ ವರದರಾಜಾ ಪಡಿಗಾಣೆ ಕಡೆಗಾಣೆ ಈತನ ವೈಭವಕ್ಕೆ ಪೊಡವಿಯೊಳಗೀತನ ಒಡೆತನಕ್ಕೆ ಒಡಒಡನಾಡುವ ವಿಜಯವಿಠಲನೀತ ಬಡವರಾಧಾರ ಕಂಚಿ ವರದರಾಜಾ || 1 || ಮಟ್ಟತಾಳ ರಾಜಾಧಿರಾಜಾ ರಾಜವಿರಾಜಿತ ರಾಜಪೂಜಿತ ರಾಜ ಶಿರೋಮಣಿ ರಾಜ ರಾಜಾಧೀಶ ರಾಜವಿಗ್ರಹ ಪೂರ್ಣ ರಾಜಮಂಡಲವದನಾ ರಾಜರಾಜವಿನುತಾ ರಾಜಶೇಖರ ತಾತಾ ರಾಜರಾಜಾಗ್ರಣಿಯ ರಾಜೀವದಳನಯನ ರಾಜಮೂರು…