Haridasa Sahitya — Vyasadasa

Tirthakshetra Sulaadi 44 — Nivriti sangama sulaadhi

ಸುಳಾದಿ ೪೪ — ನಿವರ್ತಿ ಸಂಗಮ ಸುಳಾದಿ

Composer: Vijaya Dasaru · Deity: Hari / Krishna · Genre: Sulaadi

Kannada lyrics

ನಿವರ್ತಿ ಸಂಗಮ ಸುಳಾದಿ ರಾಗ ಭಾಗೇಶ್ರೀ ಧ್ರುವತಾಳ ನಿವರ್ತಿ ಸಂಗಮಕ್ಕಾವನಾದರು ಬಂದು ಭಾವ ಶುದ್ಧದಲಿನ್ನು ಸೇವಿಸಲೂ ಹ್ಯಾವರಿಕೆ ಸಂಸಾರವಸ್ತಿ ಪರಿಹಾರ ಝಾವಾದೊಳಗೆ ಮಾನವನುತ್ತುಮಾಗೆ ಜೀವನ ಮುಕ್ತಿ ಸಿದ್ಧವಾವಬಗೆಯಲ್ಲಿ ಕಾವ ಕರುಣದಿಂದ ಕಾವನಯ್ಯಾ ಈ ವಸುಧೆಯೊಳೀ ಪಾವನ ಕ್ಷೇತ್ರಕ್ಕೆ ಸಾವಿರಾಕ್ಷನು ಬಯಸುವನು ವಾಸ ದೇವ ಋಷಿ ಗಂಧರ್ವಾವಳಿಗಳು ನಿತ್ಯ ವಾಲ ಗವ ಬಿಡದೀ ವಿಧಿ ಮಾಡುವರು ವೈವಸ್ಥನಾಮ ನಮ್ಮ ವಿಜಯವಿಠಲ ದೇವನು ಮನಮೆಚ್ಚಿ ಫಲವೀವನು ||೧|| ಮಟ್ಟತಾಳ ಕಾಶಿಯ ಪುರದಲ್ಲಿ ಭೂಸುರನ ಮಡದಿ ಹೇಸದೆ ನಿತ್ಯ ಒಬ್ಬ ಶ್ವಪಚನಲಿ ಪೋಗಿ ವಾಸರೋಸರದಲ್ಲಿ ದೋಷರಾಶಿಯ ವಾರ ಣಾಸಿಯೊಳಗೆ ಮಿಂದು ನಾಶವಗೈಸುತಿರೆ ಭಾಸುರ ಸುರ ಗಂಗೆ ದೋಷಕೆ…