Haridasa Sahitya — Vyasadasa

Tirthakshetra Sulaadi 43 — Yantroddharaka pranadeva sulaadhi

ಸುಳಾದಿ ೪೩ — ಯಂತ್ರೋದ್ಧಾರಕ ಪ್ರಾಣದೇವರ ಸುಳಾದಿ

Composer: Vijaya Dasaru · Deity: Hanuman · Genre: Sulaadi

Kannada lyrics

ಶ್ರೀಯಂತ್ರೋದ್ಧಾರಕ ಪ್ರಾಣದೇವರ ಸುಳಾದಿ ರಾಗ ಸಿಂಧುಭೈರವಿ ಧ್ರುವತಾಳ ಯಂತ್ರೋದ್ಧಾರಕ ಹನುಮಾ ಸುರಸಾರ್ವಭೌಮಾ ಮಂತ್ರಧಾರಕ ಎನಗೆ ಮನಸಿನೊಳಗೆ ಯಂತ್ರವಾಹಕನ ಪೂರ್ಣದಯದಿಂದ ಸಕ - ಲಾಂತರಿಯಾಮಿಯಾಗಿ ಚರಾಚರದಲ್ಲಿಯ ತಂತ್ರವನು ನಡೆಸುವ ಮಂತ್ರಿ ಈತನು ಕಾಣೋ ಸ್ವಾ - ತಂತ್ರ ಪುರುಷ ವಿಜಯವಿಟ್ಠಲನ್ನ ನಿಜಭಕ್ತ ಅಂತ್ರವಿಲ್ಲದ ತನ್ನ ಸ್ತುತಿಪರನ್ನ ಪೊರೆವ || 1 || ಮಟ್ಟತಾಳ ವ್ಯಾಸರಾಯರು ತಮ್ಮ ಮೀಸಲ ಮನದಲ್ಲಿ ನಿಜ - ಧ್ಯಾಸನ ಧ್ಯಾನದಲಿ ಶ್ರೀಶನ ಪೂಜಿಸಲು ಆ ಸಮಯದೊಳು ನೀ ಸುಳಿದು ನಿಂದು ಈ ಶಿಲೆಯೊಳಗೆ ಪ್ರಕಾಶಮಾನವಾಗಿ ಶ್ರೀಸಾಮಾ ವಿಜಯವಿಟ್ಠಲನ ಸೇವೆ ಹಾ - ರೈಸಿ ಇಲ್ಲೆ ಮೆರೆದೆ ದಾಸರನ ಪೊರೆದೆ || 2 || ತ್ರಿವಿಡಿತಾಳ ಮೂರುಕ…