Haridasa Sahitya — Vyasadasa
Tirthakshetra Sulaadi 42 — Hampi kshetra sulaadhi
ಸುಳಾದಿ ೪೨ — ಹಂಪಿಕ್ಷೇತ್ರ ಸುಳಾದಿ
Composer: Vijaya Dasaru · Deity: Hari / Pampa · Genre: Sulaadi
Kannada lyrics
ಹಂಪಿಕ್ಷೇತ್ರ ಸುಳಾದಿ ರಾಗ ಅಭೇರಿ ಧ್ರುವತಾಳ ದಕ್ಷಿಣ ವಾರಣಾಸಿ ಕ್ಷೇತ್ರವೆನಿಸುವದು ಯಕ್ಷೇಶನಾಪ್ತ ಇಲ್ಲಿ ವಾಸವಯ್ಯಾ ಅಕ್ಷರ ಒಂದು ನುಡಿವ ಹೊತ್ತು ಮನುಜಾ ಬಂದು ಈ ಕ್ಷೇತ್ರದಲ್ಲಿ ಇದ್ದ ಫಲಕೆ ಅಲ್ಲಿ ನೀಕ್ಷಿಸಿ ನೋಡಲು ಎಣಿಸಲಿನ್ನಾರಳವೆ ನಿಕ್ಷೇಪವೆನ್ನಿ ಸದಾ ವಂಶಾವಳಿಗೇ ನಕ್ಷತ್ರ ಮಳಲು ಮಳಿಯ ಹನಿ ಕಡಲ ಥೆರೆ ವೃಕ್ಷ ಜಾತಿಗಳೆಲೆ ಎಣಿಸಬಹುದು ಲಕ್ಷಣವುಳ್ಳ ಪುಣ್ಯಗಣಣೆ ಮಾಡುವರಾರು ಅಕ್ಷಯವಾಗುತಿಪ್ಪದು ದಿನದಿನಕೇ ಕುಕ್ಷಿಗೋಸುಗ ಇಲ್ಲಿ ಬಹು ಕಾಲವಿದ್ದರೂ ಮೋಕ್ಷಸಾಧನವಲ್ಲ ದುರುಳರಿಗೆ ದಕ್ಷಿಣಾಧೀಶ ಈ ಪರಿ ಇದ್ದವರ ವೈದು ಶಿಕ್ಷಿಸುವನು ಜನುಮ ಜನುಮದಲ್ಲಿ ಚಕ್ಷುಶ್ರವಣಶಾಯಿ ವಿಜಯವಿಠಲನಂಘ್ರ ರಕ್ಷೆಯಿಂದ ದಾಸನ್ನ ರಕ್ಷಿಸ…