Haridasa Sahitya — Vyasadasa
Tirthakshetra Sulaadi 41 — Kanakagiri mahatma sulaadhi
ಸುಳಾದಿ ೪೧ — ಕನಕಗಿರಿ ಮಹಾತ್ಮ ಸುಳಾದಿ
Composer: Vijaya Dasaru · Deity: Narasimha · Genre: Sulaadi
Kannada lyrics
ಕನಕಗಿರಿ ಮಹಾತ್ಮ ನರಸಿಂಹ ಸುಳಾದಿ ರಾಗ ಶಂಕರಾಭರಣ ಧ್ರುವತಾಳ ರುದ್ರಾಂತರ್ಯಾಮಿ ನಾರಸಿಂಹ ಮಹಾಸಿಂಹ ರೌದ್ರಾವತಾರ ತರಣಿಕೋಟಿ ಭಾಸ ಭದ್ರದಾಯಕ ಭಕ್ತರಾಧೀನ ಅನುದಿನ ಉದ್ರೇಕಮತಿ ಕೊಡುವ ಉದಧಿಶಯನ ಕ್ಷುದ್ರ ದಾನವ ತತಿಯ ಧರಣಿಗೆ ಕೆಡಹಿಸು ನಿದ್ರರಮಾಡುವ ಧೀರಶಾಲಿ ಹೃದ್ರೋಗ ಮೂಲಕಿತ್ತಿ ಕೀರ್ತಿಯ ಪೊತ್ತಗುಣ ಸ - ಮುದ್ರ ವಜ್ರನಖ ನಿಟಿಲನೇತ್ರ ಸದೃಶರಹಿತ ರೂಪ ಬಲು ಬಹುಪ್ರತಾಪ ವಿದ್ರುಮ ನಯನ ವಿಚಿತ್ರರದನ ರುದ್ರಾಂತರ್ಯಾಮಿ ಸ್ವಾಮಿ ಭಳಿಗೆ ಛಿದ್ರಾನೇಕ ಇಪ್ಪದೇಹ ಬರುವ ಉ - ಪದ್ರವ ಪರಿಹರಿಸೊ ಎನಗೆ ಒಲಿದು ಮುದ್ರಾಧರರ ಒಡನೆ ಭಕ್ತಿಯ ಕೊಟ್ಟು ಜ - ಗದ್ರಮಣ ಕಾಯಬೇಕು ನಾರಸಿಂಹ ನಿದ್ರಾರಹಿತ ನಮ್ಮ ವಿಜಯವಿಠಲ ಕನ - ಕಾದ್ರೀಶ ಕರು…