Haridasa Sahitya — Vyasadasa
Tirthakshetra Sulaadi 40 — Mahanandi kshetra sulaadhi
ಸುಳಾದಿ ೪ — ಮಹಾನಂದಿನಿಕ್ಷೇತ್ರ ಸುಳಾದಿ
Composer: Vijaya Dasaru · Deity: Shiva · Genre: Sulaadi
Kannada lyrics
ಮಹಾನಂದಿನಿಕ್ಷೇತ್ರ ಸುಳಾದಿ ರಾಗ ಕಲ್ಯಾಣಿ ಧ್ರುವತಾಳ ಮಹಾ ನಂದಿನಿ ಕ್ಷೇತ್ರ ಮಹಿಯೊಳು ಪ್ರತಿಗಾಣೆ ಅಹಿಪತಿ ವರ್ಣಿಸಲಾರನಯ್ಯಾ ಮಹ ಪುರುಷಾರ್ಥ ಪರ ಇಹದಲ್ಲಿ ಸಿದ್ಧ ಅಹಿಭೂಷಣನಿಲ್ಲಿ ನಲಿಯುತಿದ್ದ ಅಹಂಕಾರವೆನಿಳಿದು ವಿಹಿತದಿಂದಲಿ ಯಾತ್ರಿ ರಹಸ್ಯದಲ್ಲಿ ಮಾಡಿದ ನರಗೆ ದೇಹ ನಿರ್ಮಳ ಪಂಚದ್ರೋಹಗಳೊಡೋವು ಶ್ರೀ ಹರಿ ದಯದಿಂದ ಪಾಲಿಸುವ ಮಹಯಜ್ಞನಾಮ ವಿಜಯವಿಠಲನ ದಾ - ಸೋಹಂನಾಗದತಿ ಫಲವಾಹದೆ ಮರುಳೆ ||೧|| ಮಟ್ಟತಾಳ ಶಿಲವೆಂಬೋವಿಪ್ರಾ ಬಲುಕಾಲಾದಲಿ ಒಲಿದು ತಪವಮಾಡಿ ಪುಲಿದೊಗಲಾಂಬರನಾ ಒಲಿಸಿ ಮಕ್ಕಳ ಪಡೆದ ಬಲವಂತರೀರ್ವರನು ಇಳಿಯೊಳ 'ಪೆಸರಾದಾ' ಬಲವಂತ ಮಹಕರ್ಮ ವಿಜಯವಿಠಲನ್ನಾ ಒಲುಮೆಯಿಂದಲಿ ಕ್ಷೇತ್ರಾಪೊಳೆವುದು ನಿತ್ಯದಲಿ ||೩…