Haridasa Sahitya — Vyasadasa

Tirthakshetra Sulaadi 39 — Srisaila kshetra sulaadhi

ಸುಳಾದಿ ೩೯ — ಶ್ರೀಶೈಲಕ್ಷೇತ್ರ ಸುಳಾದಿ

Composer: Vijaya Dasaru · Deity: Mallikarjuna · Genre: Sulaadi

Kannada lyrics

ಶ್ರೀಶೈಲಕ್ಷೇತ್ರ ಸುಳಾದಿ ರಾಗ ತಿಲಂಗ್ ಧ್ರುವತಾಳ ಶ್ರೀಶೈಲಾ ಪಂಚಪಂಚಕೋಶಾ ಯಾತ್ರೆಯುಂಟು ಶೇಷಾದ್ರಿ ಪುಚ್ಛಭಾಗಾವೆಂದು ತಿಳಿದೂ ಶೇಷಭೂಷಣನಿಲ್ಲಿ ವಾಸವಾಗಿಪ್ಪನು ಶ್ರೀಶನ ದಯದಿಂದ ತೀರ್ಥಾಸವನೀವುತ್ತ ದೇಶದೊಳಗೆ ಭೂಕೈಲಾಸದಿಕವಿದು ಕಾಶಿ ರಾಮೇಶ್ವರ ಮಧ್ಯದಲ್ಲಿ ದೋಷವಿಬಂಧನಾ ಪಾಶಾನೆ ಹರಿಸೋದು ವಿಸಜನ್ಮದ ಕೇಶನಾಶನವಾಗುವದೂ ಕೇಶವನ ಧೀರ್ಘದ್ವೇಷಿಗಳು ಇಲ್ಲಿ ವಾಸವಾದರು ಫಲಾ ಲೇಶವಿಲ್ಲ ವಾಸುದೇವನಾಮಾ ವಿಜಯವಿಠಲರೇಯನ ದಾಸನಲ್ಲಾದವಗೆ ಈ ಸುಲಭ ದೊರಕೋದೆ ||೧|| ಮಟ್ಟತಾಳ ಸುತನ ಸ್ನೇಹದಿಂದ ಪಿತಾಮಹನು ಬಂದು ಅತಿಶಯದೀಶನಾ ಹಿತವಾಗಿ ಪೂಜಿಸಿದ ಸತತ ವಲ್ಮೀಕದೊಳು ಮಿತಿಯಿಲ್ಲದ ವರುಷಾ ಹುತನೇತ್ರನಿರಲು ಜಿತಮನ್ಯುನಾಮಾ ವಿಜಯವಿಠಲನ…