Haridasa Sahitya — Vyasadasa

Tirthakshetra Sulaadi 37 — Ahobila narasimha kshetra sulaadhi

ಸುಳಾದಿ ೩೭ — ಅಹೋಬಲ ನರಸಿಂಹ ಕ್ಷೇತ್ರ ಸುಳಾದಿ

Composer: Vijaya Dasaru · Deity: Narasimha · Genre: Sulaadi

Kannada lyrics

ಅಹೋಬಿಲ ನರಸಿಂಹ ಕ್ಷೇತ್ರ ಸುಳಾದಿ ರಾಗ ಕೇದಾರಗೌಳ ಧ್ರುವತಾಳ ಅನಂತಾನಂತಶಯನಾ ಅಂಬುಜದಳ ನಯನ ಉನ್ನಂತ ಗುಣನಿಲಯಾ ಪನ್ನಗಗೇಯ ಘನ್ನ ಕಾರುಣ್ಯಮೂರ್ತಿ ಸತತ ಮಂಗಳ ಕೀರ್ತಿ ಚನ್ನ ಪ್ರಸನ್ನರನ್ನ ಶಿರಿ ಸಂಪನ್ನ ಚಿನ್ನಾಂಬರ ಚಿನ್ನರೂಪ ಚಿನ್ಮಯ ಕಾಯ ಭಿನ್ನ ಜೀವರಪರಿಭಿನ್ನ ವ್ಯಾಪ್ತಾ ಪನ್ನಗನಾಗಾತಾ ನಾಗಭಯ ವಿನಾಶ ಜುನ್ನಾ ಚೋರಾ ಚತುರಾ ಚತುರ್ಮೊಗನ್ನಯ್ಯಾ ಅಣೋರಣೀ ಅಜರಾ ಅನಾದಿದೇವ ಪಾ- ವನ್ನಾ ಜೀವನ್ನಾ ದುಷ್ಟ ಜನ ಮರ್ದನಾ ಬಣ್ಣಾ ಬಣ್ಣಾದ ಘನ್ನವರ್ನಾ ಸುಪರ್ನ ವಾ- ಹನ್ನಾ ಭವಾರಣ್ಯಾ ದಾಹನ್ನ ನಿತ್ಯಾ ಜೊನ್ನ ಪ್ರಕಾಶ ದಿಕ್ಕರಿಸುವ ತೇಜಾ ಪ್ರ- ಸನ್ನಾ ಕೇಶವ ಭಂಜನ್ನಾ ಸುನಿರಂಜನ್ನಾ ಎನ್ನಂತರಂಗದೊಳಗಿಪ್ಪ ವಿಜಯವಿಠಲಾ ಅನಂತಗಿರಿ…