Haridasa Sahitya — Vyasadasa
Tirthakshetra Sulaadi 102 — Sri Vishnupada mahatma sulaadhi
ಸುಳಾದಿ ೧೦೨ — ಶ್ರೀವಿಷ್ಣುಪಾದ ಮಹಾತ್ಮ ಸುಳಾದಿ
Composer: Vijaya Dasaru · Deity: Vishnupada · Genre: Sulaadi
Kannada lyrics
ಶ್ರೀವಿಷ್ಣುಪಾದ ಸುಳಾದಿ ರಾಗ ನಾಟಿಕುರಂಜಿ ಧ್ರುವತಾಳ ಜಗವೆಲ್ಲಾ ವ್ಯಾಪಿಸಿದ ಬಲು ಅತೀಂದ್ರಿಯ ಪಾದ ಪಗೆಗಳ ಮಸ್ತಕಾದ್ರಿಗೆ ವಜ್ರಪ್ರಹರ ಪಾದ ಝಗಝಗಿಸುವ ಪರಮ ಮಂಗಳ ಖಣಿಯ ಪಾದ ನಿಗಮಾವಳಿಗೆ ಇದು ನಿಲುಕದ ಪಾದ ಅಗಣಿತ ಗುಣಪೂರ್ಣ ಸೌಮ್ಯ ಪಾದ ತ್ರಿಗುಣಾತೀತವಾದ ಶೃಂಗಾರನಿಧಿ ಪಾದ ಗಗನ ನದಿಯ ಪೆತ್ತ ಗಂಭೀರ ಪಾದ ಖಗರಾಜನ ದಿವ್ಯ ಪೆಗಲಲ್ಲಿ ಪೊಳೆವ ಪಾದ ಯುಗಯುಗದಲ್ಲಿ ಇಲ್ಲಿ ಪೂಜೆಗೊಂಬುವ ಪಾದ ಬಗೆ ಬಗೆ ವರಗಳ ಕೊಡುವ ಪಾದ ಮಿಗೆ ಸಹಾಸವುಳ್ಳ ಮಿಸಣಿಯಾಭರಣ ಪಾದ ಅಘದೂರ ಪಾದ ಅತಿಚಿತ್ರ ಪಾದ ನಗವೈರಿನುತ ನಮ್ಮ ವಿಜಯವಿಠಲ ಪ - ನ್ನಗಶಾಯಿಯ ಪಾದ ವಿಷ್ಣುಪಾದ || 1 || ಮಟ್ಟತಾಳ ಧರ್ಮ ಶಿಲಿಯ ಮೇಲೆ ಮೆರೆವ ಮಣಿಯ ಪಾದ ಕರ್ಮ ಖಂಡನೆ ಮ…