Haridasa Sahitya — Vyasadasa

Tirthakshetra Sulaadi 101 — Gaya kshetra mahima sulaadhi

ಸುಳಾದಿ ೧೦೧ — ಗಯಾಕ್ಷೇತ್ರ ಮಹಿಮಾ ಸುಳಾದಿ

Composer: Vijaya Dasaru · Deity: Gaya / Vishnu · Genre: Sulaadi

Kannada lyrics

ಗಯಾಕ್ಷೇತ್ರ ಮಹಿಮಾ ಸುಳಾದಿ ರಾಗ ಹಂಸಾನಂದಿ ಧ್ರುವತಾಳ ಶ್ರೀಗಯಾದ ಯಾತ್ರಿ ಮಾಡಿ ಸಿದ್ಧಸಾಧ್ಯ ಮಾನವರು ಆಗಮೋಕ್ತಿಯಿಂದ ತಿಳಿದು ನೋಡಿ ಭೋಗದಾಸೆಯ ಬಿಟ್ಟು ಭಕುತಿಮಾರ್ಗದಿಂದ ಯೋಗಿ ಜನರ ಸಂಗಡದಿಂದಲಿ ಯಾಗ ಮೊದಲಾದ ಕರ್ಮಕಲಾಪಂಗಳು ತ್ಯಾಗಮಾಡಿದರು ದೋಷವಿಲ್ಲಾ ಸಾಗಿ ಬಂದು ಇಲ್ಲಿ ನೂರೊಂದು ಕುಲವ ಲೇ - ಸಾಗಿ ಉದ್ಧರಿಸಬೇಕು ತ್ರಿಕರ್ಣದೀ – ಭಾಗಾದೆಯಾದವ ದ್ವೇಷದಿಂದಲಿ ಬರ - ಲಾಗಿ ಮುಕ್ತಿಯುಂಟು ಪಿತ್ರಾದಿಗೇ ಈಗಲಾಗೆನ್ನದಿರಿ ಕಂಡ ಮಾತುರ ಬಲು ವೇಗಾದಿಂದಲಿ ನರಕಾ ದೂರಾಗೋವೂ ಸಾಗರಶಾಯಿ ನಮ್ಮ ವಿಜಯವಿಟ್ಠಲನಂಘ್ರ ಜಾಗುಮಾಡದೆ ನೆನಸೆ ಸಮಸ್ತ ಕಾರ್ಯಸಿದ್ಧಿ || 1 || ಮಟ್ಟತಾಳ ಪರಮ ಪ್ರೀತಿಯಿಂದ ಫಲ್ಗುಣಿ ಶ್ರಾದ್ಧವನು ವಿರಚಿ…