Haridasa Sahitya — Vyasadasa
Tirthakshetra Sulaadi 100 — Kashi kshetra mahatma sulaadhi
ಸುಳಾದಿ ೧೦೦ — ಕಾಶಿ ಕ್ಷೇತ್ರ ಮಹಾತ್ಮ ಸುಳಾದಿ
Composer: Vijaya Dasaru · Deity: Kashi Keshava · Genre: Sulaadi
Kannada lyrics
ಕಾಶಿ ಕ್ಷೇತ್ರ ಮಹಾತ್ಮ ಸುಳಾದಿ ರಾಗ ಹಿಂದೋಳ ಧೃವತಾಳ ಕಾಶಿ ಕೇಶವ ನಿರ್ಮಿತಾ ಕೈವಲ್ಯಾ ಸಿದ್ಧಾ ಸ್ವ- ಕಾಶವಾಗಿದೆ ಸತ್ವಾಭಾಗದಲ್ಲಿ ದೇಶಾಮಧ್ಯದ ಅದಕ್ಕೆ ಎಣೆ ಮಿಗಿಲುಗಾಣೆ ಈಶನು ಇಲ್ಲಿ ವಾಸಾ ಹರಿಕೃಪೆಯಿಂದ ವಾಸವಾಗಿದ್ದ ಜನಕೆ ರಾಮನಾಮ ಉಪ - ದೇಶವನ್ನೆ ಮಾಡುವ ಮನದಿ ನೋಡಿ ಕೇಶವಿದೂರ ಶಂಭು ಇಲ್ಲಿ ಆಸಕ್ತನಾಗಿ ಲೇಸು ಲೇಸು ಎಂದೆನುತ ತಲೆದೂಗುವ ರಾಸಿ ಗುಣಗಳಿಂದಾ ಹರಿಯನ್ನೆ ಹಾಡಿಪಾಡಿ ದೋಷರಹಿತನಾದ ಜಗವರಿಯೇ ಕಾಶಿ ಕೇವಲಾ ವಿಷ್ಣುಕ್ಷೇತ್ರವಾ ಕಾಣೋಗಿ ರೀಶಗೆ ದತ್ತಾ ಈ ಪುರದ ಪದವೀ ಆ ಸುರವೃತ್ತಿಯಿಂದಾ ಪೇಳುವ ಮಾತು ನಿ- ಶೈಸದಿರಿ ಮನದೊಳು ಮಹಾಧೀರಾರು ಕಾಶಿಕೇಶವ ಆದಿಕೇಶವನೆಂದಾ ಮಾ - ನಿಸನ್ನ ಪುಣ್ಯಕ್ಕೆ ಗಣನೆ ಇಲ್ಲಾ…