Haridasa Sahitya — Vyasadasa

Tatvabhimani Sulaadi 5 — Tatvabhimani devategala stotra sulaadhi

ಸುಳಾದಿ ೫ — ತತ್ವಾಭಿಮಾನಿ ದೇವತೆಗಳ ಸ್ತೋತ್ರ ಸುಳಾದಿ

Composer: Vijaya Dasaru · Deity: Vishnu / Vitthala · Genre: Sulaadi

Kannada lyrics

ತತ್ವಾಭಿಮಾನಿ ದೇವತೆಗಳ ಸ್ತೋತ್ರ ಸುಳಾದಿ ರಾಗ ದೇಶ್ ಧ್ರುವತಾಳ ನಮೊ ನಮೊ ಸಮಸ್ತ ತತ್ವಾಭಿಮಾನಿಗಳಿರಾ ನಿಮಗೆ ಹಸ್ತವ ಮುಗಿದು ಕೊಂಡಾಡುವೆ ಕ್ರಮದಿಂದ ಬಿನ್ನಪವ ಲಾಲಿಸಿ ಕೇಳುವದು ಅಮರ ನಿಮ್ಮಗ ಮಜ್ಜನಗೋಸುಗ ಅಮಲಮತಿ ಇತ್ತು ಜ್ಞಾನ ಭಕ್ತಿಯಿಂದ ರಮೆಯರಸನ್ನ ನೋಳ ಸಾಧನ ತೋರಿ ಗಮನಾದಿ ಮೊದಲಾದ ವ್ಯಾಪಾರ ನಿಮ್ಮಾಧೀನ ಶ್ರಮ ಸಾಧ್ಯವಾಗದಂತೆ ಪೈಣವಿತ್ತು ತಮೊ ರಜೊಗುಣದವರ ಬಾಧಿಯ ತಪ್ಪಿಸಿ ಉ - ತಮ ಯಾತ್ರಿ ಮಾಡಿಸುವದು ತ್ರಯಕ್ಷೇತ್ರದ ಕುಮತ ಪೊಂದಿದ ನಿತ್ಯ ಕುಮತಿ ಜನರ ಸಂಗ ನಿಮಿಷವಾದರೆ ಕೊಡದೆ ಪಾಲಿಸಬೇಕು ಯಮ ನೇಮ ಮಿಗಿಲಾದ ಸತ್ಕರ್ಮಾಚಾರದಿಂದ ಸಮಚಿತ್ತ ಭೇದದಿಂದ ಇರಲಿ ಎನಗೆ ನಮೊ ನಮೊ ಸಮಸ್ತ ತತ್ವಾಭಿಮಾನಿಗಳಿರಾ ಕುಮತಿಯ ಬ…