Haridasa Sahitya — Vyasadasa
Tatvabhimani Sulaadi 4 — Adhyatma upasane sulaadhi
ಸುಳಾದಿ ೪ — ಅಧ್ಯಾತ್ಮ ಉಪಾಸನೆ ಸುಳಾದಿ
Composer: Vijaya Dasaru · Deity: Vishnu / Vitthala · Genre: Sulaadi
Kannada lyrics
ಅಧ್ಯಾತ್ಮ ಉಪಾಸನೆ ಸುಳಾದಿ ರಾಗ ಸಾವೇರಿ ಧ್ರುವತಾಳ ಅರ್ಚಾ ಅರ್ಚನೆ ಮಾಡು ಅಧಿಕಾರ ಭೇದದಿಂದ ನಿಚ್ಚಾ ವರ್ಜಿತ ಕಾಮನಾಗಿ ಬಾಗೀ ಅಚ್ಯುತ ದೈವವೆಂದು ಆಹ್ಲಾದದಿಂದ ಸದಾ ಸಚ್ಚಿದಾನಂದಾತ್ಮಾದಿ ಗುಣಗಳಿಂದಾ ಮೆಚ್ಚಿಸು ಮನಸು ಪೂರ್ವಕದಿಂದ ಯೋಗ್ಯತಾದನಿತು ಮೆಚ್ಚಿಸು ಹರಿಯ ವೊಳಗೆ ಹೊರಗೆ ತಿಳಿದು ಸಚ್ಚಿದಾನಂದಾದಿಗಳ ಗುಣಗಳಿಂದ ಧ್ಯಾನಗೈದು ಎಚ್ಚರನಾಗು ನಿನ್ನ ಯೋಗ್ಯತಾದನಿತು ನೆಚ್ಚಿದವರ ಪ್ರಾಣ ಪ್ರಕೃತಿ ರಮಣ ಹರಿ ಸುಚ್ಚರಿತ್ರನು ಕಾಣೋ ತನ್ನ ತೋರಿ ಅರ್ಚರಾದಿ ಲೋಕ ಐದಿಸಿ ತಾತ್ವಿಕರ ಹೆಚ್ಚು ಹೆಚ್ಚಾಗಿ ವೊಳಗೆ ಪೊಳೆವ ದ್ವಿವಿಧ ಅಚ್ಯುತಾನಂತ ರೂಪಗಳಾನಂತ ನಿಚ್ಚಳವಾಗಿವೆ ನೋಡಿದಲ್ಲಿ ಬಚ್ಚಿಡತಕ್ಕದ್ದು ಈ ಪ್ರಮೇಯ ಕಂಡಲ್ಲಿ ಬಿಚ…