Haridasa Sahitya — Vyasadasa
Tatvabhimani Sulaadi 3 — Pancha mahabhutagala sulaadhi
ಸುಳಾದಿ ೩ — ಪಂಚ ಮಹಾಭೂತಗಳ ಸುಳಾದಿ
Composer: Vijaya Dasaru · Deity: Vishnu / Vitthala · Genre: Sulaadi
Kannada lyrics
ಪಂಚ ಮಹಾಭೂತಗಳ ಸುಳಾದಿ ರಾಗ ಷಣ್ಮುಖಪ್ರಿಯ ಧ್ರುವತಾಳ ಎತ್ತಣ ಭೂತಂಗಳೊ ಎಲ್ಲಿ ಪೊಕ್ಕರೆ ಬಿಡವು ಹತ್ತಿಕೊಂಡಿಪ್ಪವು ನಾನಾ ಜನುಮ ಸುತ್ತಿದ ಕಾಲಕ್ಕು ತೊಲಗದೆ ವ್ಯಾಪ್ತವಾಗಿ ಅತ್ತಲಿತ್ತ ಪೋಗದೆ ಇರುತಿಪ್ಪವು ಮೃತ್ತಿಕೆ ನೀರು ಬೆಳಕು ಘಾಳಿ ಬಯಲು ಎಂಬೊ ಮತ್ತೆ ನಾಮಗಳಿದಕೆ ಸರ್ವಕಾಲ ಉತ್ತರೋತ್ತರದಿಂದ ಗುಣಗಳು ಅಧಿಕವುಂಟು ಜತ್ತಾಗಿಪ್ಪವು ಒಂದನ್ನೊಂದು ಬಿಡದೆ ಹೊತ್ತು ಹೊತ್ತಿಗೆ ಲೋಕ ಪೇಳುವದಾಡುವದು ಬಿತ್ತುವದು ಬೆಳೆಯುವದು ಚರಿಸುವದು ತುತ್ತು ಮಿಕ್ಕಾದ ಚೇಷ್ಟೆ ಈ ಭೂತಗಳಿಂದ ನಿತ್ಯದಲಿಯಾಗುವದು ಬೊಮ್ಮಾಂಡದಿ ಮುತ್ತು ಮಾಣಿಕ ಹೇಮ ರಜತ ನಾನಾ ದ್ರವ್ಯ ಮೊತ್ತಂಗಳಲ್ಲಿ ಈ ಭೂತಂಗಳು ಸುತ್ತಿಕೊಂಡಿಪ್ಪವು ಬ್ರಹ್ಮಾಂಡ ಬಾಹಿರಕ್…