Haridasa Sahitya — Vyasadasa

Tatvabhimani Sulaadi 2 — Chaturvimshati tatva sulaadhi

ಸುಳಾದಿ ೨ — ಚತುರ್ವಿಂಶತಿ ತತ್ವ ಸುಳಾದಿ

Composer: Vijaya Dasaru · Deity: Vishnu / Vitthala · Genre: Sulaadi

Kannada lyrics

ಚತುರ್ವಿಂಶತಿ ತತ್ವ ಸುಳಾದಿ ರಾಗ ಆರಭಿ ಧ್ರುವತಾಳ ತತು ಪೂರ್ವದಲ್ಲಿ ಯನಗೆ ಹಿತವಾದ ಹಿರಿಯರು ಪ್ರತಿಯಿಲ್ಲದ ಧನ ಸ್ಥಾಪಿಸಿರಲು ಕ್ಷಿತಿಯ ಶೋಧಿಸಲಿಲ್ಲ ಕಂಡ ಕಡೆ ತಿರುಗಿ ಮತಿ ಭ್ರಮಣನಾಗಿ ಅರಸಲಿಲ್ಲ ಸಥೆಯಲ್ಲಿಟ್ಟಂತೆ ಬರುತಲೆ ಗುರುತ ಕಂಡೆ ಮಿತಿ ಯಾವುದು ಯೆನ್ನ ಅತಿಶಯಕೆ ಚತುರಬಾಹು ನಾಮ ವಿಜಯವಿಟ್ಠಲನ್ನ ನುತಿಸುವ ಭಾಗ್ಯ ಸುಕೃತ ಧನವೆಂತೊ || 1 || ಮಟ್ಟತಾಳ ಚತುರವಿಂಶತಿ ಹಳೆ ನಾಣ್ಯಗಳಯ್ಯ ಪ್ರತಿ ಪ್ರತಿ ಪೆಸರುಗಳು ಒಂದೊಂದರ ಮ್ಯಾಲೆ ಪೃಥುವಿಗೆ ನೂತನದ ಶುದ್ಧ ಮುದ್ರೆ ಪಡಿ ಶ್ರುತಿಯಲ್ಲಿ ಶೋಧಿಸಲು ಆದಿಯಲ್ಲಿ ಉಂಟು ಚತುರಮೂರುತಿ ನಾಮ ವಿಜಯವಿಟ್ಠಲನ್ನ ನತಜನಾಶ್ರಯವೊ ಎನ್ನ ಪುಣ್ಯಭಾಗ್ಯವೊ || 2 || ರೂಪಕತಾಳ ಬಣ್ಣ ನ…