Haridasa Sahitya — Vyasadasa
Tatvabhimani Sulaadi 1 — Eko Vishnuh maharbhuta mantra sulaadhi
ಸುಳಾದಿ ೧ — ಏಕೋ ವಿಷ್ಣುಃ ಮಹರ್ಭೂತ ಮಂತ್ರ ಸುಳಾದಿ
Composer: Vijaya Dasaru · Deity: Vishnu / Vitthala · Genre: Sulaadi
Kannada lyrics
ಏಕೋ ವಿಷ್ಣುಃ ಮಹರ್ಭೂತ ಮಂತ್ರ ಸುಳಾದಿ ರಾಗ ಭೂಪಾಳಿ ಧ್ರುವತಾಳ ಭೂತ ಸೋಕಿತು ಕಾಣೋ ಯಾತರ ವರ್ನಾವೊ ಮಾತು ಲಾಲಿಸೆ ವಿಪರೀತವೆನಿಸುತಿದೆ ಜಾತಿ ಮತ್ತಾವದೊ ಜಾತಿವೆಂಬೊದೆ ಇಲ್ಲಾ ಗಾತುರ ನೋಡಿದರೆ ಭೀತಿ ನಿರ್ಭೀತಿ ಬಪ್ಪದು ಶಾತಕುಂಭದವನ ಜಾತ ಭವಾಂಡದ ಸ - ಪೂತಾವರಣ ಅವ್ಯಾಕೃತ ಗಗನ ಸಮೇತ ತೋಲಗದೆ ವ್ಯಾಪುತವಾಗಿವೆ ಇದರ ಭೀತಿಗೆ ಬೊಮ್ಮಾದ್ಯರು ಧಾತು ಕೆಡುತಲಿರೆ ಭೂತಳದೊಳಗುಳ್ಳ ರಾತಿ ಆರಾತಿಗಳಿಗೆ ದೈತ ಅದೈತವೆಂದು ತಾ ತಿಳುಪೀರ್ವಾದರೊಳು ಪಾತಕಗೊಬ್ಬನ ಮು - ಕುತಿಗೆ ಒಬ್ಬನ ಈ ರೀತಿಯಲ್ಲಿ ಕಳುಹಿ ಪ್ರೀತನೆನಿಸುವದು ಚೇತನ ಅಚೇತನ ವ್ರಾತದೊಳಗೆ ಮಹತವಾಗಿಪ್ಪ ವಿಖ್ಯಾತ ಭೂತ ಕಾಣೋ ಜ್ಯೋತಿ ಸ್ವರೂಪ ನಮ್ಮ ವಿಜಯವಿಟ್ಠಲ ಸರ್ವ ಭೂ…