Haridasa Sahitya — Vyasadasa

Taratamya Sulaadi 9 — Tamoyogyara taratamya prakaran sulaadhi

ಸುಳಾದಿ ೯ — ತಮೋಯೋಗ್ಯರ ತಾರತಮ್ಯ ಪ್ರಕರಣ ಸುಳಾದಿ

Composer: Vijaya Dasaru · Deity: Vishnu / Hari · Genre: Sulaadi

Kannada lyrics

ತಮೋಯೋಗ್ಯರ ತಾರತಮ್ಯ ಪ್ರಕರಣ ಸುಳಾದಿ ರಾಗ ಪೂರ್ವಿಕಲ್ಯಾಣಿ ತಮೋ ಯೋಗ್ಯ ಜೀವರಾಶಿ ಅದರೊಳು ಗಣಸ್ಥರು ಅಮಿತವಾಗಿಪ್ಪರು ಲಿಂಗಸಹಿತ ಶಮ ದಮೆಗಳು ಇಲ್ಲ ನಿಜರೂಪ ಬಲುಕಪ್ಪು ಕ್ರಮದಿಂದ ದುಃಖಾತ್ಮರು ಕೇಳಿ ಜನರೂ ತಮೋ ಯೋಗ್ಯರೊಳು ಕೇವಲ ಶ್ರೇಷ್ಠ ಕಲಿಯೆನ್ನಿ ಸಮನಿಲ್ಲ ಇವನ ದುಃಖಕ್ಕೆ ಎಂದಿಗೆ ತಮ ತಾಮಸರು ಕಲಿ ಸ್ವಲ್ಪತರ ಸ್ವಲ್ಪ ಕ- ಡಿಮೆಯಾಗಿ ತತ್ವದಲ್ಲಿ ಇಪ್ಪಖಳರೂ ತಮ ರಾಜಸರೂ ದೈತ್ಯ ನೃತ್ಯಾನಾಖ್ಯಾತ ದೈತ್ಯರು ತಮ ಸತ್ವದವರು ಮಾನವ ನೀಚರು ವಮನ ಮೂತ್ರ ಶೌಚ ನಾನಾ ಹೇಸಿಕಿಗೆ ಈ ಸಮುದಾಯದವರು ಅಭಿಮಾನಿಗಳು ಉಮೆಯರಸನ್ನ ತನಕ ಕಲಿವ್ಯಾಪ್ತನಾಗಿ ವಿ- ಭ್ರಮಣ ಗೊಳಿಸುವನು ಅಧಿಕಾಧಿಕ ಸುಮನಸ ಗಣಕೆ ಸ್ವಲ್ಪ ಇತ್ತ ಮುಂತಾದ ಮನುಜೋ-…