Haridasa Sahitya — Vyasadasa

Taratamya Sulaadi 8 — Samasta devategala upasana krama sulaadhi

ಸುಳಾದಿ ೮ — ಸಮಸ್ತ ದೇವತೆಗಳ ಉಪಾಸನಾ ಕ್ರಮ ಸುಳಾದಿ

Composer: Vijaya Dasaru · Deity: Lakshmi / Vishnu · Genre: Sulaadi

Kannada lyrics

ಸಮಸ್ತ ದೇವತೆಗಳ ಉಪಾಸನಾ ಕ್ರಮ ಸುಳಾದಿ ರಾಗ ಅಭೇರಿ ಧ್ರುವತಾಳ ನಿತ್ಯ ಮೂಲಪ್ರಕೃತಿ ಅಭಿಮಾನಿ ಶ್ರೀ ಭೂದುರ್ಗಾ ಸತ್ಯವಾಗಿಪ್ಪಳು ಅಪ್ರಾಕೃತಗಳು ಸತ್ವ ರಾಜಸ ತಮೊ ಮೂರು ಗುಣ ಮಿಳಿತ ತಶ್ವೇಶರಲ್ಲಿ ಇಲ್ಲ ನಿಧಾನಿಸು ಅತ್ಯಂತವಾಗಿ ವಿಷ್ಣು ಬ್ರಹ್ಮ ರುದ್ರಾಭಿಧಾನ ಕರ್ತೃ ಭಗವಂತ ನಿಯಾಮಕಾ ಇತ್ತ ಲಾಲಿಸುವದು ಕಾರಣದಿಂದ ಮುಂ ದತ್ತ ಬರಲು ಕಾರ್ಯ ಗುಣತ್ರಯವೊ ಸತ್ವಗುಣಕೆ ವಾಸುದೇವ ಹಯವದನ ಮಿಕ್ಕ ಮೂರ್ತಿಗಳೆನ್ನು ರಜೋಗುಣ ಪ್ರ- ವರ್ತಕ ಜಾಮದಗ್ನಿ ಮಿಗಿಲಾದ ರೂಪ ತಮ ಪ್ರ- ವರ್ತಕ ರೂಪಂಗಳು ವರಹಾದಿಯು ಸುತ್ತಿಸುವ ಮೂರು ಗುಣ ಬಹುಪರಿ ಪೊಳ- ವುತ್ತಲಿವೆ ಸೂಕ್ಷ್ಮ ಮದ್ಯ ಸ್ಕೂಲಾ ಪ್ರತ್ಯೇಕ ಪ್ರತ್ಯೇಕ ಇದಕಭಿಮಾನಿಗಳು ತಶ್ವೇಶರು ಉಂ…