Haridasa Sahitya — Vyasadasa

Taratamya Sulaadi 7 — Svatantra vibhaga taratamya sulaadhi

ಸುಳಾದಿ ೭ — ಸ್ವತಂತ್ರ ವಿಭಾಗದ ತಾರತಮ್ಯ ಸುಳಾದಿ

Composer: Vijaya Dasaru · Deity: Vishnu / Brahman · Genre: Sulaadi

Kannada lyrics

ಸ್ವತಂತ್ರ ವಿಭಾಗದ ತಾರತಮ್ಯ ಸುಳಾದಿ ರಾಗ ಆರಭಿ ಧೃವತಾಳ ಆ ಶೂನ್ಯ ನಾಮಕ ಪೂರ್ಣ ಬ್ರಹ್ಮ ದೋಷ ರಹಿತ ಪೂರ್ಣೇಶ್ವರ್ಯ ಈಶ ಸಮಗ್ರ ಪೂರ್ಣಾನಂದ ಭೂಷ ಸ್ವರೂಪ ಭೂತ ಅಪ್ರಾಕೃತ ಶ್ರೀ ಸತಿನಾಥ ತ್ರಿಗುಣಾ ತೀತ ದೇಶ ಕಾಲಾ ಸರ್ವಾ ಅವಿನಾ ಆ ಶೂನ್ಯ ನಾಮಕ ಪೂರ್ಣ ಬ್ರಹ್ಮಾ ರಾಶಿ ಜೀವಿಗಳನ್ನು ತನ್ನೊಳಗೆ ಲೇಶಾಯಾಸವಿಲ್ಲದೆ ಪೂರ್ಣ ಶಕ್ತಿ ಏಸೇಸು ಕಲ್ಪಕೇ ಲೀಲಾ ಮಾತ್ರಾ ವಾಸ ವಾಗಿಪ್ಪ ನಿರ್ಲಿಪ್ತಾ ಸಂಗ ವಾಸುದೇವಾದಿ ರೂಪ ಕೇಶವ ಹೃಷೀಕೇಶ ಕೇಶಾ ಕೇಶಿ ಪಾದಾಂಗುಟ ಮೀಸಲ ಜ್ಞಾನ ಪೂರ್ಣ ಸಂಪೂರ್ಣ ಹಾಸ ವೃದ್ಧಿ ವರ್ಜಿತ ವರಗಾತ್ರಾ ಶಾಶ್ವತ ಪರಬೊಮ್ಮ ಪತಿತ ಪರಾ ಸುಷುಪ್ತಿಯಲ್ಲಿಯೇಕ ಮೇವ ಕೇಶನಾಶನ ಕಾರುಣ್ಯ ಮೂರ್ತಿ ವಿಶಾಲ ಗುಣಾನಂತ ಜಲಧಿ…